ಕಾಸರಗೋಡು: ನಾಪತ್ತೆ ಯಾಗಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಾರಪ್ಪಳ್ಳಿ ಕಣ್ಣೋತ್ ನಿವಾಸಿ ಚಂದ್ರನ್ ಎಂಬವರ ಪುತ್ರ ರಿಜೇಶ್ (29) ಮೃತಪಟ್ಟ ಯುವಕನಾಗಿದ್ದಾನೆ. ಬುಧವಾರ ಮಧ್ಯಾಹ್ನದಿಂದ ಈತ ನಾಪತ್ತೆಯಾಗಿದ್ದನು. ಈ ಬಗ್ಗೆ ತಾಯಿ ಅಂಬಲತ್ತರ ಪೊಲೀಸರಿಗೆ ದೂರು ನೀಡಿದ್ದರು. ನಿನ್ನೆ ಬೆಳಿಗ್ಗೆ ನಾಗರಿಕರು ನಡೆಸಿದ ಹುಡುಕಾಟ ವೇಳೆ ಈತನನ್ನು ಮನೆಯಿಂದ 200 ಮೀಟರ್ ದೂರದ ಮರವೊಂದರಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ.
