ನಾರಂಪಾಡಿ ಕ್ಷೇತ್ರ: ವಿಜ್ಞಾಪನಾ ಪತ್ರ ಬಿಡುಗಡೆ, ನಿಧಿ ಸಂಗ್ರಹಕ್ಕೆ ಚಾಲನೆ
ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ 2025, ಫೆ 2ರಿಂದ 10ರ ತನಕ ನಡೆಯುವ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ನಿದಿs ಸಂಗ್ರಹ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರದಲ್ಲಿ ನಿನ್ನೆ ಚಾಲನೆ ನೀಡಲಾಯಿತು. ಬ್ರಹ್ಮಕಲ ಶೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿದ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಆಶೀರ್ವಚನ ನೀಡಿದರು.
ನಿದಿs ಸಂಗ್ರಹಕ್ಕೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜಿ.ಶರ್ಮಾ ಕೋಳಿಕ್ಕಜೆ ಚಾಲನೆ ನೀಡಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಮಜೆಕ್ಕಾರ್, ನಾರಂಪಾಡಿ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್, ಹಣಕಾಸು ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಪ್ರಧಾನ ಸಂಚಾಲಕ ಹರಿನಾರಾಯಣ ಶಿರಂತ್ತಡ್ಕ, ಉಬ್ರಂ ಗಳ ಶ್ರೀ ಮಹಾದೇವ ಕ್ಷೇತ್ರದ ಆಡಳಿತ ಸಮಿತಿ ಕಾರ್ಯದರ್ಶಿ ಕಿರಣ್ ಕುಣಿಕುಳ್ಳಾಯ, ಶ್ರೀಕ್ಷೇತ್ರದ ಅರ್ಚಕ ಶಂಕರನಾರಾಯಣ ಕೆದಿಲ್ಲಾಯ, ಬ್ರಹ್ಮ ಕಲಶೋತ್ಸವ ಸಮಿತಿ ಕೋಶಾದಿsಕಾರಿ ಸೀತಾರಾಮ ಕುಂಜತ್ತಾಯ, ಕುಂಞ Âರಾಮ ಗೋಸಾಡ ಉಪಸ್ಥಿತರಿದ್ದರು. ಬ್ರಹ್ಮಕಲಶ ಸಮಿತಿ ಸದಸ್ಯರು, ವಿವಿಧ ಉಪಸಮಿತಿಗಳ ಪದಾದಿsಕಾರಿಗಳು, ಸೇವಾ ಸಮಿತಿ ಸದಸ್ಯರು, ಭಕ್ತರು ನಿದಿs ಸಂಗ್ರಹದಲ್ಲಿ ಪಾಲ್ಗೊಂಡರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ಟರ್ ನಾರಂಪಾಡಿ ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ನಾರಂಪಾಡಿ ವಂದಿಸಿದರು. ರವೀಂದ್ರ ಶೆಟ್ಟಿ ಗೋಸಾಡ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಲಿವಾಡು ಕೂಟ ನಡೆಯಿತು.