ನಿತೀಶ್ ಕುಮಾರ್ ನಾಳೆ ರಾಜೀನಾಮೆ?  ಹೊಸ ಸರಕಾರ ರಚನೆ ಸಾಧ್ಯತೆ

ಪಾಟ್ನಾ: ಬಿಜೆಪಿ ನೇತೃತ್ವದ ಎನ್‌ಡಿಯೇತರ ಎಲ್ಲಾ ವಿಪಕ್ಷಗಳನ್ನು ಒಗ್ಗೂಡಿಸಿ ಅದಕ್ಕೆ ಪರ‍್ಯಾಯವಾಗಿ ‘ಇಂಡಿಯಾ’ ನೇತೃತ್ವದಲ್ಲಿ ಬಲಿಷ್ಠ ವಿಪಕ್ಷ ಒಕ್ಕೂಟ ರಚಿಸುವ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳು ಒಂದೆಡೆ ಶತ ಪ್ರಯತ್ನದಲ್ಲಿ ತೊಡಗಿರುವಂತೆಯೇ ಅದಕ್ಕೆ ಮಾರಕ ಆಘಾತ ನೀಡಿ ‘ಇಂಡಿಯ’ ಒಕ್ಕೂಟದ ಸಂಚಾಲಕರೇ ಆಗಿರುವ ಜೆ.ಡಿ.ಯು ನೇತಾರ ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಆ ಒಕ್ಕೂಟವನ್ನೇ  ತೊರೆದು ತನ್ನ ಹಳೇ ಗೂಡು ಆಗಿರುವ ಎನ್‌ಡಿಎಗೆ ಸೇರ್ಪಡೆಗೊಳ್ಳುವ ತಯಾರಿಕೆಯಲ್ಲಿ ತೊಡಗಿದ್ದಾರೆ.

ನಿತೀಶ್ ಕುಮಾರ್ ಎನ್‌ಡಿಎಗೆ ಮರು ಪ್ರವೇಶ ಸಾಧ್ಯತೆ ಬಹುತೇಕ ನಿಶ್ಚಳಗೊಂಡಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಇಂದು ನಡೆಯಲಿರುವ ಚರ್ಚೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಎನ್‌ಡಿಎ ಕೇರಳ ಘಟಕದ ಅಧ್ಯಕ್ಷ ಹಾಗೂ ಬಿಜೆಪಿ ಕೇರಳ ಘಟಕದ ಅಧ್ಯಕ್ಷರೂ ಆಗಿರುವ ಕೆ. ಸುರೇಂದ್ರನ್‌ರ ನೇತೃತ್ವದಲ್ಲಿ ಇಂದು ಅಪರಾಹ್ನ ಕಾಸರಗೋಡಿನಿಂದ ಆರಂಭಗೊಳ್ಳಬೇಕಾಗಿರುವ ಕೇರಳ ಪಾದಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ದಿಲ್ಲಿಯಲ್ಲೇ ಉಳಿದುಕೊಂಡಿದ್ದಾರೆ. ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾದಲ್ಲಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಬಿಜೆಪಿಯ ಇಬ್ಬರು ಉಪ ಮುಖ್ಯಮಂತ್ರಿಗಳು ಒಳಗೊಳ್ಳಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ವಿಪಕ್ಷ ನಾಯಕ ವಿಜಯ್ ಕುಮಾರ್ ಸಿನ್ಹಾ ಮತ್ತು ಕೇಂದ್ರ ಸಚಿವ ನಿತ್ಯಾನಂದ ರಾಮ್ ಯವರ ಪೈಕಿ ಇಬ್ಬರು  ಉಪಮುಖ್ಯ ಮಂತ್ರಿಯಾಗುವ ಸಾಧ್ಯತೆ ಇದೆ.

ಒಟ್ಟು ೨೪೩ ಸದಸ್ಯರ ಬಲ ಹೊಂದಿರುವ ಬಿಹಾರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ೧೨೨ ಸದಸ್ಯರ ಬಲ ಬೇಕಾಗಿದೆ. ಬಿಜೆಪಿ ೭೮ ಮತ್ತು ಜೆಡಿಯು- ೪೫ ಸದಸ್ಯರ ಬಲ ಹೊಂದಿದೆ. ಎಂಟು ಸ್ಥಾನ ಹಿಂದುಸ್ಥಾನ್ ಅವಾಮಿ ಮೋರ್ಚಾದ  ನಾಲ್ವರು ಶಾಸಕ ಮತ್ತು ಓರ್ವ ಪಕ್ಷೇತರ ಶಾಸಕರ ಬೆಂಬಲವನ್ನು ಎನ್‌ಡಿಎ ಹೊಂದಿದೆ.

ಇನ್ನೊಂದೆಡೆ ಆರ್‌ಜೆಡಿ ೭೮, ಕಾಂಗ್ರೆಸ್ ೩, ಇದರ ಹೊರತಾಗಿ ವಾಮ ಪಕ್ಷಗಳು ಸೇರಿದಂತೆ ಆ ಒಕ್ಕೂಟ ೧೧೪ ಸದಸ್ಯರ ಬಲ ಹೊಂದಿದೆ.  ನಿತೀಶ್ ಕುಮಾರ್ ಪಕ್ಷದ ಎಂಟು ಶಾಸಕರನ್ನು ತನ್ನತ್ತ ಸೆಳೆದುಕೊಳ್ಳುವ ಹಿಂಬಾಗಿಲ ಪ್ರಯತ್ನದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಇನ್ನೊಂದೆಡೆ ತೊಡಗಿದ್ದು, ಅದರಂತೆ ಆ ಎಂಟು ಶಾಸಕರು ಆರ್‌ಜೆಡಿ ಪಾಳಯಕ್ಕೆ ಸೇರ್ಪಡೆಗೊಂ ಡಲ್ಲಿ ಬಿಹಾರದಲ್ಲಿ  ‘ಇಂಡಿಯಾ’ ನೇತೃತ್ವದ ಸರಕಾರ  ಅಧಿಕಾರ ಇನ್ನೂ ಮುಂದರಿಯಲಿದೆ. ಅದು ಸಫಲವಾಗಲಿದೆಯೇ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.

ಎನ್‌ಡಿಎ ಘಟಕ ಪಕ್ಷವಾದ ಜಿತಿನ್ ರಾಮ್ ಮಾಂಚಿಯ ನೇತೃತ್ವದ ಹಿಂದುಸ್ಥಾನ್ ಅವಾಮಿ ಮೋರ್ಚಾ (ಸೆಕ್ಯೂಲರ್) ಆ ಒಕ್ಕೂಟವನ್ನು ತೊರೆದು ಆರ್‌ಜೆಡಿಗೆ ಬೆಂಬಲ ನೀಡಲಿದೆ ಎಂಬ ರೀತಿಯ ವದಂತಿಗಳು ಹಬ್ಬಿಕೊಂಡಿದ್ದು, ಅದು ಸುಳ್ಳು ಎಂದು ಜಿತಿನ್ ರಾಮ್ ಮಾಂಜಿ ಸ್ಪಷ್ಟಪಡಿಸಿದ್ದಾರೆ. ಹೊಸ ರಾಜಕೀಯ ಲೆಕ್ಕಾಚಾರದಂತೆ ಈ ಬಾರಿ ಬಿಜೆಪಿ ಜತೆಗೆ ಸೇರಿ ನಿತೀಶ್ ಕುಮಾರ್ ಮತ್ತೆ ಸಿ.ಎಂ. ಆದಲ್ಲಿ, ಒಟ್ಟು ಎಂಟು ಬಾರಿ ಬಿಹಾರದ ಮುಖ್ಯಮಂತ್ರಿಯಾದ ಹೊಸ ದಾಖಲೆಯನ್ನು ಅವರು ಬರೆಯಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page