ನಿರಂತರ ಕುಸಿಯುತ್ತಿರುವ ಕುಂಬಳೆ ಪೊಲೀಸ್ ಠಾಣೆಯ ಸೀಲಿಂಗ್: ಅಪಾಯ ಭೀತಿ

ಕುಂಬಳೆ: ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಪರಿಹಾರ ಕಲ್ಪಿಸಬೇಕಾದ ಪೊಲೀಸ್ ಠಾಣೆಯೇ ಅಪಾಯ ಭೀತಿಯೊಡ್ಡುತ್ತಿದೆ.

ಕುಂಬಳೆ ಪೊಲೀಸ್ ಠಾಣೆ ಇದೀಗ ಅಪಾರ ಭೀತಿಯನ್ನು ಒಡ್ಡುತ್ತಿದೆ. ಠಾಣೆಯೊಳಗೆ ಸೀಲಿಂಗ್ ನಿತ್ಯ ಕುಸಿದು ಬೀಳುತ್ತಿರುವುದರಿಂದ ಅಲ್ಲಿನ ಪೊಲೀಸರಿಗೇ ರಕ್ಷಣೆಯಿಲ್ಲ ದಂತಾಗಿದೆ.  ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸೀಲಿಂಗ್ ಉದು ರತೊಡಗಿದೆ. ಮೊನ್ನೆ ಸೀಲಿಂಗ್ ಕುಸಿದು ಬೀದ್ದಿದ್ದು,  ಆ ವೇಳೆ ಅಲ್ಲಿ ಜಿ.ಡಿ ಚಾರ್ಜ್ ಹೊಂದಿರುವ ಪ್ರಶಾಂತ್, ಕರ್ತವ್ಯದಲ್ಲಿರುವ ಅನೂಪ್ ಎಂಬವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ನಿನ್ನೆಯೂ ಸೀಲಿಂಗ್ ಕುಸಿದಿದ್ದು, ಈ ವೇಳೆ ಅಲ್ಲಿ ಯಾರೂ ಇಲ್ಲದುದರಿಂದ ಅಪಾಯ ತಪ್ಪಿದೆ. ನಿರಂತರವಾಗಿ ಸೀಲಿಂಗ್ ಕುಸಿಯು ತ್ತಿರುವುದರಿಂದ ಸಾರ್ವಜನಿಕರು ಠಾಣೆಯೊಳಗೆ  ಪ್ರವೇಶಿಸಲು ಭಯಪಡಬೇಕಾಗಿ ಬಂದಿದೆ.

1979ರಲ್ಲಿ ಕುಂಬಳೆ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಲಾಗಿದ. ಅನಂತರ ಯಾವುದೇ ದುರಸ್ತಿ ನಡೆದಿಲ್ಲವೆನ್ನಲಾಗಿದೆ.

You cannot copy contents of this page