ನಿಲಂಬೂರು ಅರಣ್ಯ ಕಚೇರಿಗೆ ಹಾನಿ: ಶಾಸಕ ಅನ್ವರ್ ಬಂಧನ
ಮಲಪ್ಪುರಂ: ನಿಲಂಬೂರಿನಲ್ಲಿ ಅರಣ್ಯ ಕಚೇರಿಗೆ ಹಾನಿಯಾದ ಘಟನೆಯಲ್ಲಿ ನೋಂದಾಯಿಸಿದ ಕೇಸಿನಂತೆ ಶಾಸಕ ಪಿ.ವಿ. ಅನ್ವರ್‌ನನ್ನು ಬಂಧಿಸಲಾಗಿದೆ. ಡಿವೈಎಸ್‌ಪಿಯವರ ನೇತೃತ್ವದ ತಂಡ ಎಡವಣ್ಣ ಬತಾಯಿ ಯ ಮನೆಗೆ ತಲುಪಿ ಬಂಧನ ದೃಢಪ ಡಿಸಿದೆ. ಅನ್ವರ್‌ನನ್ನು ಸೆರೆಹಿಡಿ ಯಲು ಪೊಲೀಸರು ತಲುಪು ವರೆಂಬ ಸುದ್ದಿ ಹಿನ್ನೆಲೆಯಲ್ಲಿ ಡಿಎಂಕೆ ಕಾರ್ಯಕರ್ತ ರ ಸಹಿತ ಅನ್ವರ್‌ರ ಬೆಂಬಲಿಗರು ಮನೆ ಬಳಿ ಜಮಾಯಿಸಿದ್ದರು.
ನಿಲಾಂಬೂರಿನಲ್ಲಿಕಾಡಾನೆಯ ಆಕ್ರಮಣದಿಂದಾಗಿ ಯುವಕ ಮೃತಪಟ್ಟ ಘಟನೆಯಲ್ಲಿ ಅನ್ವರ್ ನೇತೃತ್ವದ ಡಿಎಂಕೆ ಕಾರ್ಯ ಕರ್ತರು ನಿಲಾಂ ಬೂರು ಫಾರೆಸ್ಟ್ ಕಚೇರಿಗೆ ಹಾನಿಗೊ ಳಿಸಿದ್ದರು. ಈ ಘಟನೆಯಲ್ಲಿ ಅನ್ವರ್ ಒಂದನೇ ಆರೋಪಿಯಾಗಿರುವ ಕೇಸು ದಾಖಲಿಸಲಾಗಿತ್ತು.
ವಿವಿಧ ಸೆಕ್ಷನ್‌ಗಳಲ್ಲಾಗಿ ಕೇಸು ದಾಖಲಿಸಲಾಗಿದ್ದು, ಜಾಮೀನು ರಹಿತ ಆರೋಪ ವನ್ನು ಅನ್ವರ್ ವಿರುದ್ಧ ಹೊರಿಸ ಲಾಗಿದೆ. ಶಾಸಕ ಅನ್ವರ್ ಹೊರತಾಗಿ 10 ಮಂದಿಯ ವಿರುದ್ಧವೂ ಕೇಸು ದಾಖಲಿ ಸಲಾಗಿದೆ. ಶನಿವಾರ ರಾತ್ರಿ ಆನೆ ಯುವಕನನ್ನು ಆಕ್ರಮಿಸಿದ್ದು, ಬಳಿಕ ಯುವಕ ನಿಧನಹೊಂ ದಿದ ಬೆನ್ನಲ್ಲೇ ಫಾರೆಸ್ಟ್ ಕಚೇರಿಗೆ ಮಾರ್ಚ್ ನಡೆಸಲಾಗಿತ್ತು.