ನಿವೃತ್ತ ಆರ್‌ಡಿಒ ಇ. ಚಂದ್ರಶೇಖರನ್ ನಾಯರ್ ನಿಧನ
ಕಾಸರಗೋಡು: ನಿವೃತ್ತ ಕಂದಾಯ ವಿಭಾಗೀಯ ಅಧಿಕಾರಿ (ಆರ್‌ಡಿಒ) ವಿದ್ಯಾನಗರದ ಚಿನ್ಮಯ ಕಾಲನಿಯ ಶಿವಾದ ನಿವಾಸಿ ಇ. ಚಂದ್ರಶೇಖರನ್ ನಾಯರ್ (79) ನಿಧನ ಹೊಂದಿದರು. ಇವರು ಕಿಡ್ನಿ ಸಂಬಂಧಿತ ಕಾಯಿಲೆ ಯಿಂದ ಚಿಕಿತ್ಸೆಯಲ್ಲಿದ್ದರು. ನಿನ್ನೆ ಸಂಜೆ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಡಯಾಲಿಸಿಸ್ ನಡೆಸಲು ಅವರನ್ನು ಕೊಂಯೊಯ್ಯಲಾಗಿತ್ತು. ಆ ವೇಳೆ ಅವರು ಕೊನೆಯ ಉಸಿರೆಳೆದರು.
ಮಾತೃಭಾಷೆ ಮಲೆಯಾಳ ವಾದರೂ ಕನ್ನಡ ಮಾಧ್ಯಮದಲ್ಲೇ ಕಲಿತು ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆಲ್ಲ್ಲ ಸದಾ ಪೂರಕವಾಗಿ ಸ್ಪಂದಿಸುತ್ತಿದ್ದ ಓರ್ವ ದಕ್ಷ ಹಾಗೂ ಪ್ರಾಮಾಣಿಕ ಕಂದಾಯ ಇಲಾಖೆಯ ಧಿಕಾರಿಯಾಗಿದ್ದರು ಚಂದ್ರಶೇಖರನ್ ನಾಯರ್. ಇವರು ಮೂಲತಃ ಬೋವಿಕ್ಕಾನಕ್ಕೆ ಸಮೀಪದ ಪಾತನಡ್ಕ ನಿವಾಸಿಯಾಗಿದ್ದಾರೆ. ಇವರ ಪಾರ್ಥಿವ ಶರೀರವನ್ನು ಇಂದು ವಿದ್ಯಾನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸ ಲಾಯಿತು. ಬಳಿಕ ಅವರ ಹುಟ್ಟೂರಾದ ಪಾತನಡ್ಕ ತರವಾಡಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.
ರೆಸಿಡೆನ್ಶಿಯಲ್ ಅಸೋಸಿ ಯೇಷನ್‌ನ ಜಿಲ್ಲಾ ಮಟ್ಟದ ಫೆಡರೇಶನ್ (ಫ್ರಾಂಕ್)ನ ಸ್ಥಾಪಕ ಚಂದ್ರಶೇಖರನ್ ಅಧ್ಯಕ್ಷರೂ ಆಗಿದ್ದ ಚಂದ್ರಶೇಖರನ್ ನಾಯರ್, ರೆಡ್ ಕ್ರಾಸ್‌ನ ಜಿಲ್ಲಾಧ್ಯಕ್ಷ ಎನ್‌ಎಸ್‌ಎಸ್ ಕರೆಯೋಗಂನ ಜಿಲ್ಲಾ ಅಧ್ಯಕ್ಷ, ಚಿನ್ಮಯಾ ಕಾಲನಿ ರೆಸಿಡೆನ್ಸಿ ಅಸೋಸಿಯೇಷನ್‌ನ ಸ್ಥಾಪಕ ಅಧ್ಯಕ್ಷ, ಕಾಸರಗೋಡು ಚಿನ್ಮಯ ಮಿಷನ್‌ನ ಕಾರ್ಯದರ್ಶಿ, ಕಾಸರಗೋಡು ಪೀಪಲ್ಸ್ ಫೋರಂನ ಉಪಾಧ್ಯಕ್ಷರಾಗಿದ್ದರು. ಮಾತ್ರವಲ್ಲದೆ ಇವರ ಇತರ ಹಲವು ಕಲಾ- ಸಾಂಸ್ಕೃಕತಿಕ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದರು.
ಮೃತರು ಪತ್ನಿ ಕೆ.ಪಿ. ಲಕ್ಷ್ಮಿ, ಮಕ್ಕಳಾದ ಕೆ.ಪಿ. ಆಶಾ, ಕೆ.ಪಿ. ಅಂಬಿಕ, ಅಳಿಯಂದಿರಾದ ಕ್ಯಾಪ್ಟನ್ ದಾಮೋದರನ್ ನೆಟ್ಟೂರು, ನಾರಾಯಣನ್ ನಾಯರ್ ಕರಿಚ್ಚೇರಿ, ಸಹೋದರ ಸಹೋದರಿಯರಾದ ಇ. ಲಕ್ಷ್ಮಿ, ಇ. ರಾಧಾಕೃಷ್ಣನ್ ನಾಯರ್, ಇಂದಿರಾ, ಇ. ಅನಂತನ್ ನಾಯರ್, ಇ. ಪ್ರಸನ್ನ ಚಂದ್ರನ್, ಇ. ಅನಿಲ್ ಕುಮಾರ್, ಶರ್ಮಿಳ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.