ನಿವೃತ್ತ ಎಸ್‌ಐ ವಾಸುದೇವ ಬಟ್ಟತ್ತೂರು ನಿಧನ
ಕಾಸರಗೋಡು: ಕರ್ನಾಟಕದಲ್ಲಿ ಎಸ್‌ಐ ಆಗಿ ನಿವೃತ್ತರಾದ ಬಟ್ಟತ್ತೂರು ನಿವಾಸಿ ವಾಸುದೇವ (75) ಹೃದಯಾಘಾತದಿಂದ ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮಂಗಳೂರಿನಲ್ಲಿ ಎಸ್‌ಐಯಾಗಿ ನಿವೃತ್ತರಾಗಿದ್ದರು. ಬಳಿಕ ಬಟ್ಟತ್ತೂರು ಬಳಿ ಕೃಷಿ, ಸಮಾಜಸೇವೆ ನಡೆಸುತ್ತಿದ್ದರು. ಶ್ರೀ ಪಾಂಡುರಂಗ ದೇವಸ್ಥಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪತ್ನಿ ಸುಲೋಚನ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ರವೀಂದ್ರನಾಥ, ನ್ಯಾಯವಾದಿ ವಿವೇಕಾನಂದ ಪನೆಯಾಲ, ಸುನಿತಾ ಕುಮಾರಿ, ನಾಗವೇಣಿ, ರಂಗನಾಥ, ನ್ಯಾಯವಾದಿ ಮಂಜುನಾಥ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.