ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಗಣಿತ ಪುಸ್ತಕಗಳ ಬಿಡುಗಡೆ

ಕಾಸರಗೋಡು: ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶ ಮಹಾಲಿಂಗೇಶ್ವರ ರಾಜ್ ಡಿ. ರಚಿಸಿದ ಎರಡು ಪುಸ್ತಕಗಳನ್ನು ವೇದಮೂರ್ತಿ ಮಹಾದೇವ ಭಟ್ ಕೋಣಮ್ಮೆ ಇತ್ತೀಚೆಗೆ ಬಿಡುಗಡೆಗೊಳಿಸಿದರು. ಲೋಕಸೇವಾ ಆಯೋಗದ ಎಲ್.ಡಿ.ಸಿ. ಪರೀಕ್ಷೆ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾ ಗಿರುವ ಗಣಿತ ಸಂಬಂಧಿತ ವಿಚಾರಗಳು ಒಳಗೊಂಡ ‘ಗಣಿತ ವಿಚಾರ’, ‘ಗಣಿತ-ಕೆಲವು ಮೂಲಭೂತ ವಿಚಾರಗಳು ಚಟುವಟಿಕಾ ಪುಸ್ತಕ’ವನ್ನು ಪ್ರಕಟಿಸಲಾಗಿದೆ. ಇದರಲ್ಲಿ ವಿವಿಧ ಪರೀಕ್ಷೆಗಳಿಗೆ ಪಿಎಸ್‌ಸಿ ಕೇಳಿದ ಪ್ರಶ್ನೆಗಳನ್ನು ಹಾಗೂ ಅವುಗಳ ಉತ್ತರವನ್ನು ವಿವರಿಸಲಾಗಿದೆ. ಈ ಪುಸ್ತಕಗಳು ಶಿಕ್ಷಣ ಉದ್ಯೋಗ ಮಾಹಿತಿ ಮಾರ್ಗದರ್ಶನ ಕೇಂದ್ರವಾದ ಮಾಸ್ಟರ್ ಕೋಚಿಂಗ್ ಸೆಂಟರ್, ಬ್ಯಾಂಕ್ ರಸ್ತೆ, ಕಾಸರಗೋಡು ಇಲ್ಲಿ ಆಸಕ್ತರಿಗೆ ಲಭ್ಯವಿದೆ ಎಂದು  ಸಂಬಂಧಪಟ್ಟವರು ತಿಳಿಸಿದ್ದಾರೆ.

You cannot copy contents of this page