ನಿವೃತ್ತ ಡಿಜಿಪಿಯ ಮನೆಯ ವಿದ್ಯುತ್ ಸಂಪರ್ಕ ಕಡಿತ
ಚೆನ್ನೈ: ತಮಿಳುನಾಡು ಸ್ಪೆಷಲ್ ನಿವೃತ್ತ ಡಿಜಿಪಿ ರಾಜೇಶ್‌ದಾಸ್ ವಾಸಿಸುವ ಮನೆಗಿರುವ ವಿದ್ಯುತ್ ಸಂಪರ್ಕವನ್ನು ಇವರ ಹಿಂದಿನ ಪತ್ನಿ ಹಾಗೂ ತಮಿಳುನಾಡು ವಿದ್ಯುತ್ ಇಲಾಖೆಯ ಕಾರ್ಯದರ್ಶಿ ಯಾಗಿರುವ ಬಿಲ ವೆಂಕಿಟೇಶನ್ ವಿಚ್ಛೇಧಿಸಿದರು. ಬಿಲ ಅಧಿಕಾರವನ್ನು ದುರುಪಯೋಗಪಡಿಸುತ್ತಿದ್ದಾರೆಂದು ಆರೋಪಿಸಿ ರಾಜೇಶ್ ರಂಗಕ್ಕಿಳಿದಿದ್ದಾರೆ. ಮನೆ ಇರುವ ಸ್ಥಳ ಹಾಗೂ ವಿದ್ಯುತ್ ಸಂಪರ್ಕ ತನ್ನ ಹೆಸರಿನಲ್ಲಿದೆ ಎಂದು ಹಿಂದಿನ ಪತ್ನಿ ಪ್ರತಿಕ್ರಿಯಿಸಿದ್ದಾರೆ. ಅನಗತ್ಯ ವೆಚ್ಚವನ್ನು ಕಡಿತಮಾಡುವುದಕ್ಕಾಗಿ ವಿದ್ಯುತ್ ಸಂಪರ್ಕವನ್ನು ವಿಚ್ಛೇಧಿಸಿರುವುದಾಗಿ ಬಿಲ ತಿಳಿಸಿದ್ದಾರೆ. ವಿದ್ಯುತ್ ಸಂಪರ್ಕವನ್ನು ವಿಚ್ಛೇಧಿಸುವುದಕ್ಕಾಗಿ ತಮಿಳುನಾಡಿನ ವಿದ್ಯುತ್ ಇಲಾಖೆ ಅಧಿಕಾರಿಗಳು ಆದಿತ್ಯವಾರ ರಾಜೇಶ್ ವಾಸಿಸುವ ಮನೆಗೆ ತಲುಪಿದ್ದರಾದರೂ ಅದಕ್ಕೆ ರಾಜೇಶ್ ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ವಿದ್ಯುತ್ ಇಲಾಖೆಯ ಕಾರ್ಯದರ್ಶಿಯ ಪತ್ರದೊಂದಿಗೆ ಅಧಿಕಾರಿಗಳು ತಲುಪಿ ವಿದ್ಯುತ್ ಸಂಪರ್ಕ ಕಡಿತ ಪೂರ್ತಿಗೊಳಿಸಿದ್ದಾರೆ.
ಲಿಖಿತವಾಗಿ ತನ್ನ ಅಭಿಪ್ರಾಯ ಕೇಳದೆ ಸ್ವೀಕರಿಸಿದ ಕ್ರಮದ ವಿರುದ್ಧ ರಾಜೇಶ್ ರಂಗಕ್ಕಿಳಿದಿದ್ದಾರೆ. ಇದುವರೆಗೆ ನಾನು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಭೂಮಿಯ ಮಾಲಕ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕೆಂದು ಆಗ್ರಹಿಸಿದರೂ ಮನೆಯಲ್ಲಿ ವಾಸವಿದ್ದರೆ ವಿದ್ಯುತ್ ಇಲಾಖೆಗೆ ಈ ರೀತಿಯಲ್ಲಿ ವಿದ್ಯುತ್ ಸಂಪರ್ಕ ವಿಚ್ಛೇಧಿಸಲು ಸಾಧ್ಯ ವಾಗದೆಂದು ರಾಜೇಶ್ ತಿಳಿಸಿದ್ದಾರೆ. ಇದೇ ವೇಳೆ ಕಳೆದ ಮೂರು ತಿಂಗಳಿಂದ ಮನೆ ಖಾಲಿಯಾಗಿದೆ ಎಂದು ಬಿಲ ವೆಂಕಿಟೇಶ್ ತಿಳಿಸಿದ್ದಾರೆ. ರಾಜೇಶ್ ಆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆಗ ಳಿಲ್ಲವೆಂದು ಬಿಲ ತಿಳಿಸಿದ್ದಾರೆ.
ಐಪಿಎಸ್ ಅಧಿಕಾರಿಯನ್ನು ದೌರ್ಜನ್ಯಗೈದ ಪ್ರಕರಣದಲ್ಲಿ ರಾಜೇಶ್‌ದಾಸ್ ತಪ್ಪಿತಸ್ಥನೆಂದು 2023ರಲ್ಲಿ ವಿಲ್‌ಪುರಂ ನ್ಯಾಯಾಲಯ ತೀರ್ಪು ನೀಡಿತ್ತು.