ಕಾಸರಗೋಡು: ನಿವೃತ್ತ ಪಂಚಾಯತ್ ಕಾರ್ಯದರ್ಶಿ ರಾಮ ಎನ್.ಎ. (76) ನಿಧನ ಹೊಂದಿದರು. ನೆಲ್ಲಿಕುಂಜೆ ನಿವಾಸಿಯಾದ ಇವರು ಪ್ರಸ್ತುತ ಮೀಯಪದವಿನಲ್ಲಿ ವಾಸವಾಗಿದ್ದರು. ನೆಲ್ಲಿಕುಂಜೆ ಕೋಮರಾಡಿ ದೈವಸ್ಥಾನದ ಸದಸ್ಯರಾಗಿದ್ದರು. ಶನಿವಾರ ರಾತ್ರಿ ಅಸೌಖ್ಯ ಉಲ್ಬಣಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ನಿಧನ ಸಂಭವಿಸಿದೆ. ಮೃತರು ಪತ್ನಿ ಸತ್ಯವತಿ, ಮಕ್ಕಳಾದ ಶೈಲೇಶ್ ಎನ್. (ಪೈವಳಿಕೆ ಪಂಚಾಯತ್ ವಿಇಒ), ರಾಜೇಶ್ ಎನ್.ಆರ್, ಸೊಸೆ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
