ನಿವೃತ್ತ ಮುಖ್ಯೋಪಾಧ್ಯಾಯ ನಿಧನ

ಪೈವಳಿಕೆ: ಚಿಪ್ಪಾರು ಅಮ್ಮೇರಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಕೋಟಿ ಪೂಜಾರಿ [77] ನಿಧನರಾದರು. ಶನಿವಾರ ಬೆಳಿಗ್ಗೆ ಮನೆಯಲ್ಲಿ ಹೃದಯÁಘಾತ ಉಂಟಾಗಿದ್ದು, ಉಪ್ಪಳ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನಹೊಂದಿದ್ದಾರೆ. ಪೈವಳಿಕೆ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಕೆ.ಎಸ್.ಎಸ್.ಪಿ.ಯು ಪೈವಳಿಕೆ ಘಟಕ ಸದಸ್ಯ, ಚಿಪ್ಪಾರು ಅಮ್ಮೇರಿ ಶ್ರೀ ಧೂಮಾವತೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಹಲವು ವರ್ಷಗಳ ಕಾಲ ಸೇವೆಗೈದಿದ್ದರು. ಅಮ್ಮೇರ ಕೊಟ್ಯ ಆರ್ಟ್್ಸ ಆ್ಯಂಡ್ ಸ್ಪೋಟ್ಸ್ ಕ್ಲಬ್‌ನ ಗೌರವಾಧ್ಯಕ್ಷರಾಗಿದ್ದರು.
ಮೃತರು ಪತ್ನಿ ಅರುಣ, ಮಕ್ಕಳಾದ ಯಶೋದ, ಉದಯ ಕುಮಾರ್, ಶ್ರೀಧರ, ರಮ್ಯ, ರೋಹಿತ್, ಮುಖೇಶ್, ಸೊಸೆಯಂ ದಿರಾದ ಜಯಂತಿ, ಲೋಲಾಕ್ಷಿ, ಸೌಮ್ಯ, ಅಳಿಯ ಆನಂದ, ಸಹೋದರರಾದ ದೇರಣ್ಣ, ರಮೇಶ ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ಓರ್ವ ಅಳಿಯ ಗಿರಿಧರ ಈ ಹಿಂದೆ ನಿಧನರಾಗಿದ್ದಾರೆ.ನಿಧನಕ್ಕೆ ಕೆ.ಎಸ್.ಎಸ್.ಪಿ.ಯು ಪೈವಳಿಕೆ ಘಟಕ ಸಂತಾಪ ಸೂಚಿಸಿದೆ.

You cannot copy contents of this page