ನಿವೃತ್ತ ಮುಖ್ಯೋಪಾಧ್ಯಾಯ ನಿಧನ
ಮಂಜೇಶ್ವರ: ಹೊಸಂಗಡಿ ಬಳಿಯ ಪಿರಾರಮೂಲೆ ನಿವಾಸಿ, ಕಡಂಬಾರು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಗೋವಿಂದ ಶೆಟ್ಟಿಗಾರ್ (78) ನಿಧನ ಹೊಂದಿದರು. ಧಾರ್ಮಿಕ, ಸಾಮಾಜಿಕ ರಂಗದಲ್ಲಿ ಸಕ್ರಿಯರಾಗಿದ್ದ ಇವರು ಸಿಪಿಎಂ ಮಂಜೇಶ್ವರ ಪ್ರಾದೇಶಿಕ ಮುಖಂಡರಾಗಿದ್ದರು. ಕೆಎಸ್‌ಕೆಟಿಯು ನೇತಾರರಾಗಿದ್ದು, ಹೊಸಂಗಡಿಯಲ್ಲಿ ಬಿ.ಎಂ. ರಾಮಯ್ಯ ಶೆಟ್ಟಿ ಗ್ರಂಥಾಲಯದ ಸ್ಥಾಪನೆಗೆ ಶ್ರಮ ವಹಿಸಿದ್ದರು. ಪದ್ಮಶಾಲಿ ಸಮಾಜದ ಹಿರಿಯರಾಗಿದ್ದರು. ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಆಡಳಿತ ಸಮಿತಿ ಮಾಜಿ ಅಧ್ಯಕ್ಷ, ಕೆಎಸ್‌ಎಸ್‌ಪಿಯು ಮಂಜೇಶ್ವರ ಘಟಕ ಸದಸ್ಯರಾಗಿದ್ದರು. ಮೃತರು ಪತ್ನಿ ಗೀತಾರತ್ನ (ನಿವೃತ್ತ ಮಂಜೇಶ್ವರ ತಾಲೂಕು ತಹಶೀಲ್ದಾರ್), ಮಕ್ಕಳಾದ ಅಶ್ವತ್ಥ್‌ರಾಜ್, ಆಶಿತ, ಸೊಸೆ ಶ್ರೀರಕ್ಷಾ, ಅಳಿಯ ಪ್ರಜ್ವಲ್, ಸಹೋದರ ಬಾಲಕೃಷ್ಣ ಶೆಟ್ಟಿಗಾರ್, ಸಹೋದರಿ ಪ್ರೇಮಲತಾ ಬಿ. ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.