ನಿವೃತ್ತ ಸೇನಾಧಿಕಾರಿಯಿಂದ ಪದ್ಮಶ್ರೀ ಬೆಳೇರಿಗೆ ಗೌರವ

ಮುಳ್ಳೇರಿಯ: ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ, ವೈವಿಧ್ಯಮಯ ಭತ್ತದ ತಳಿಗಳ ಸಂರಕ್ಷಕ ಸತ್ಯನಾರಾ ಯಣ ಬೆಳೇರಿ ಅವರನ್ನು ನಿವೃತ್ತ ವಾಯುಸೇನಾ ಅಧಿಕಾರಿ, ಮಾನವಹಕ್ಕು ಆಯೋಗದ ಜಿಲ್ಲಾಧ್ಯಕ್ಷ ತಿರುಮ ಲೇಶ್ವರ ಭಜ್ ಪಜ್ಜ  ಗೌರವಿಸಿದರು. ಸತ್ಯನಾರಾಯಣರ ಬೆಳೇರಿಯಲ್ಲಿರುವ ಸ್ವಗೃಹಕ್ಕೆ ಭೇಟಿ ನೀಡಿ ಗೌರವಿಸಲಾ ಯಿತು. ಭತ್ತ ಕೃಷಿಗೆ, ತಳಿ ಸಂರಕ್ಷಣೆಗೆ ಜೀವನವನ್ನು ಮುಡಿಪಾಗಿಟ್ಟಿರುವ ಸತ್ಯನಾರಾಯಣ ಬೆಳೇರಿ ಅವರ ಯಶೋಗಾಥೆ ಜಗತ್ತಿಗೆ ಮಾದರಿಯಾಗಿದ್ದು, ಅವರಿಗೆ ಒಲಿದು ಬಂದಿರುವ ಪದ್ಮಶ್ರೀ ಪ್ರಶಸ್ತಿ ಯುವ ಸಮೂಹಕ್ಕೆ ಪ್ರೇರಣದಾಯಿ ಎಂದು ತಿರುಮಲೇಶ್ವರ ಭಟ್ ನುಡಿದಿದ್ದಾರೆ.

You cannot copy contents of this page