ನೀರ್ಚಾಲು-ಕೋಟೆಕಣಿ ರಸ್ತೆಯಲ್ಲಿ ಇಂದಿನಿಂದ ವಾಹನ ಸಂಚಾರ ನಿಷೇಧ

ಬದಿಯಡ್ಕ: ನೀರ್ಚಾಲು ಕೋಟೆಕಣಿ ರಸ್ತೆಯಲ್ಲಿರುವ ಮೋರಿಸಂಕ ಜೀರ್ಣಗೊಂಡ ಕಾರಣ ಅಪಾಯಸ್ಥಿತಿ ಯಲ್ಲಿದೆ. ಆದುದರಿಂದಾಗಿ ಈ ದಾರಿಯಾಗಿ ವಾಹನ ಸಂಚಾರ ಇಂದಿನಿಂದ ಪೂರ್ಣವಾಗಿ ನಿಷೇಧಿಸಲಾಗಿದೆ. ಬದಿಯಡ್ಕದಿಂದ ಬರುವ ವಾಹನಗಳು ಬಲಭಾಗದಿಂದ ಕೋಟೆಕಣಿ ಜಂಕ್ಷನ್‌ನಿಂದ ಮಧೂರು ಪಟ್ಲ ಕೊಲ್ಲಂಗಾನ ರಸ್ತೆಯಾಗಿ ಸಾಗಬೇಕಾಗಿದೆ. ಕಾಸರಗೋಡಿನಿಂದ ತೆರಳುವ ವಾಹನಗಳು ಮಧೂರು ಕ್ಷೇತ್ರ ಬಳಿಯ ಎಡಭಾಗದ ರಸ್ತೆ ಮೂಲಕ ಪಟ್ಲ ಕೊಲ್ಲಂಗಾನ ರಸ್ತೆ ಮೂಲಕ ಸಾಗಬೇಕೆಂದು ಕಾಸರಗೋಡು ಲೋಕೋಪಯೋಗಿ  ರಸ್ತೆ ವಿಭಾಗ ಅಸಿಸ್ಟೆಂಟ್ ಇಂಜಿನಿಯರ್ ತಿಳಿಸಿದ್ದಾರೆ.

You cannot copy contents of this page