ನೀರ್ಚಾಲು ವ್ಯಾಪಾರಿ ಘಟಕ ಮಹಾಸಭೆ
ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ನೀರ್ಚಾಲು ಘಟಕದ ವಾರ್ಷಿಕ ಮಹಾಸಭೆ ನೀರ್ಚಾಲು ವ್ಯಾಪಾರ ಭವನದಲ್ಲಿ ಜರಗಿತು. ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸಿ, ಮಾತನಾಡಿದರು.
ನೀರ್ಚಾಲು ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ರವಿ ನೀರ್ಚಾಲು ವಾರ್ಷಿಕ ವರದಿ, ಕೋಶಾಧಿಕಾರಿ ಗೋಪಾಲ ಬಿ. ಆಯವ್ಯಯ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ದಾಮೋದರನ್, ದಿನೇಶ್, ಮೊಹಮ್ಮದ್ ಕುಂಞಿ ಹಾಜಿ ಕುಂಜಾರು ಶುಭ ಕೋರಿದರು. ರವಿ ನೀರ್ಚಾಲು ಸ್ವಾಗತಿಸಿ, ಉಪಾಧ್ಯಕ್ಷ ಸತ್ಯಶಂಕರ ಭಟ್ ವಂದಿಸಿದರು.