ನೀರ್ಚಾಲು ಶಾಲೆಯಲ್ಲಿ ‘ವಿಶ್ವ ತುಳು ಲಿಪಿ ದಿನೊ’ ೧೦ರಂದು

ನೀರ್ಚಾಲು: ಜೈ ತುಳುನಾಡು ಇದರ ಕಾಸರಗೋಡು ಘಟಕ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಜಂಟಿ ಆಶ್ರಯದಲ್ಲಿ ತುಳು ಲಿಪಿ ಸಂಶೋಧಕ ಡಾ.  ವೆಂಕಟರಾಜ ಪುಣಿಂಚಿತ್ತಾಯರ ಜನ್ಮ ದಿನದಂಗವಾಗಿ ವಿಶ್ವ ತುಳು ಲಿಪಿ ದಿನೊ’ ಎಂಬ ಕಾರ್ಯಕ್ರಮ ಈ ತಿಂಗಳ ೧೦ರಂದು ಅಪರಾಹ್ನ ೩ರಿಂದ ನೀರ್ಚಾಲು ಮಹಾಜನ ಸಂಸ್ಕೃತ ಶಾಲೆಯಲ್ಲಿ ನಡೆಯಲಿದೆ. ಶಾಲೆಯ ಮೆನೇಜರ್ ಜಯದೇವ ಖಂಡಿಗೆ ಉದ್ಘಾಟಿಸುವರು. ಜೈ ತುಳುನಾಡು ಕಾಸರಗೋಡು ಘಟಕದ ಅಧ್ಯಕ್ಷೆ ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಅಧ್ಯಕ್ಷತೆ ವಹಿಸುವರು. ಮುಖ್ಯೋಪಾಧ್ಯಾಯ ಶಿವಪ್ರಕಾಶ್ ಎಂ.ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿಜಯರಾಜ್ ಪುಣಿಂಚಿತ್ತಾಯ, ಪ್ರೊ. ಎ. ಶ್ರೀನಾಥ್, ಉಮೇಶ್ ಸಿರಿಯ, ಕಿರಣ್ ಭಾಗವಹಿಸುವರು. ಅಧ್ಯಾಪಿಕೆ ಡಾ. ವಿದ್ಯಾಲಕ್ಷ್ಮಿ ಉಪನ್ಯಾಸ ನೀಡುವರು. ಅಧ್ಯಾಪಿಕೆ ಶೈಲಜಾ ನಿರ್ವಹಿಸುವರು.

RELATED NEWS

You cannot copy contents of this page