ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್ ಬೇಡಿಕೆಯೊಂದಿಗೆ ನಾಳೆ ಕಲೆಕ್ಟರೇಟ್ ಮಾರ್ಚ್
ಕಾಸರಗೋಡು: ಕಾಸರಗೋಡು ನಗರದ ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸಬೇಕೆಂಬ ಬೇಡಿಕೆ ಮುಂದಿರಿಸಿ ಜನಕೀಯ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಾಳೆ ಕಾಸರ ಗೋಡು ಕಲೆಕ್ಟರೇಟ್ ಮಾರ್ಚ್ ನಡೆಸಲು ತೀರ್ಮಾನಿಸಲಾಗಿದೆ ಎಂದು ಕ್ರಿಯಾ ಸಮಿತಿ ಪದಾಧಿ ಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಬೇಡಿಕೆ ಮುಂದಿರಿಸಿಕೊಂಡು ಕ್ರಿಯಾ ಸಮಿತಿ ಹಲವು ತಿಂಗಳುಗಳಿಂದ ನುಳ್ಳಿಪ್ಪಾಡಿಯಲ್ಲಿ ಖಾಯಂ ಚಪ್ಪರ ಹಾಕಿ ಅನಿರ್ದಿಷ್ಟಾವಧಿ ಮುಷ್ಕರ ಹೂಡುತ್ತಾ ಬಂದಿದೆ. ಆದರೆ ಕ್ರಿಯಾ ಸಮತಿಯ ಬೇಡಿಕೆಗೆ ಸಂಬಂಧಪಟ್ಟ ಇಲಾಖೆಯಿಂದ ಈತನಕ ಪೂರಕ ನಿಲುವು ಇನ್ನೂ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸಬೇಕೆಂಬ ಬೇಡಿಕೆ ಮುಂದಿರಿಸಿ ಕಳೆದ ಜನವರಿ ತಿಂಗಳಲ್ಲೇ ಈ ಪ್ರದೇಶದಲ್ಲಿ ನಿವಾಸಿಗಳು ಹೋರಾಟದೊಂದಿಗೆ ರಂಗಕ್ಕಿಳಿದಿದ್ದು, ಆ ಹೋರಾಟ ಇನ್ನೂ ಮುಂದು ವರಿಯುತ್ತಿದೆ. ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ ಪಿ. ರಮೇಶ್, ಅನಿಲ್ ಚೆನ್ನಿಕ್ಕರೆ, ಹ್ಯಾರಿಸ್ ನುಳ್ಳಿಪ್ಪಾಡಿ, ವರಪ್ರಸಾದ್ ಕೋಟೆಕಣಿ, ಎಂ. ಲಲಿತಾ, ಕೆ. ಶಾರದ ಮೊದಲಾದವರು ಈ ಮಾಹಿತಿ ನೀಡಿದ್ದಾರೆ.