ನುಳ್ಳಿಪ್ಪಾಡಿ ಯುಪಿ ಶಾಲೆಯಲ್ಲಿ ವಾಚನಾ ವಾರಾಚರಣೆ
ಕಾಸರಗೋಡು: ನುಳ್ಳಿಪ್ಪಾಡಿ ಜಿಯುಪಿಎಸ್‌ನಲ್ಲಿ ವಾಚನಾ ವಾರಾಚರಣೆಯನ್ನು ಕುಂಬಳೆ ಪಂಚಾಯತ್ ಮಾಜಿ ಅಧ್ಯಕ್ಷ, ಕೆ.ಎಲ್. ಪುಂಡರೀಕಾಕ್ಷ ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ಸೋಮನಾಥನ್ ಅಧ್ಯಕ್ಷತೆ ವಹಿಸಿದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯನ್ನು ರಮ್ಯಶ್ರೀ ಟೀಚರ್ ಉದ್ಘಾಟಿಸಿದರು. ಬಳಿಕ ಮುಜೀಬ್, ರಮ್ಯಶ್ರೀ ಪುಸ್ತಕ ಪರಿಚಯ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಶ್ರೀಲತ ಸ್ವಾಗತಿಸಿ, ಸ್ಟಾಫ್ ಸೆಕ್ರೆಟರಿ ಚಂದ್ರನ್ ವಂದಿಸಿದರು. ಬಳಿಕ ಪುಸ್ತಕ ಪ್ರದರ್ಶನ ನಡೆಯಿತು.