ನೆಕ್ರಾಜೆ ಕ್ಷೇತ್ರದಲ್ಲಿ ಪುತ್ರಕಾಮೇಷ್ಠಿ, ಧನ್ವಂತರಿ ಯಾಗ ಸಮಾಪ್ತಿ

ಬದಿಯಡ್ಕ: ನೆಕ್ರಾಜೆ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಧನ್ವಂತರಿ ಪುತ್ರ ಕಾಮೇಷ್ಠಿ ಯಾಗ ಸಮÁಪ್ತಿಗೊಂಡಿತು. ಡಾ. ವೇಣು ಗೋಪಾಲ ಕಳೆಯತ್ತೋಡಿ ದೀಪ ಪ್ರಜ್ವಲನೆಗೊಳಿಸಿದರು. ನಂತರ ವಿವಿಧ ಸಂಘಗಳಿAದ ಭಜನಾ ಕಾರ್ಯಕ್ರಮ ನಡೆಯಿತು. ಗಣಪತಿ ಹೋಮ, ಯಾಗ ಸಂಕಲ್ಪ ಧನ್ವಂತರಿ ನಾಮಜಪ ಯಜ್ಞ, ಧನ್ವಂತರಿ ಯಾಗ ಪುತ್ರ ಕಾಮೇಷ್ಠಿ ಯಾಗದ ನೇತೃತ್ವವನ್ನು ವೈದಿಕ ವಿದ್ವಾಂಸ ಕಶೆಕೋಡಿ ಸೂರ್ಯನಾರಾಯಣ ಭಟ್ ಕಲ್ಲಡ್ಕ ವಹಿಸಿದ್ದರು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಆಧ್ಯಾತ್ಮಿಕ ಶಕ್ತಿ ಆರಾಧನೆ ಜಪ ತಪ ಯಾಗದಿಂದ ಸಂತತಿ ಈ ಎಲ್ಲ ವಿಚಾರಗಳನ್ನು ವೈಜ್ಞಾನಿಕವಾಗಿ ತುಲನೆ ಮಾಡಬಾರದು, ಏಕಾಗ್ರತೆಯಿಂದ ಭಗವಂತನ ಸೇವೆಯಲ್ಲಿ ಸಂಪೂರ್ಣ ವಾಗಿ ನಮ್ಮನ್ನು ನಾವು ತೊಡಗಿಸಿ ಕೊಂಡಾಗ ಪರಿಪೂರ್ಣವಾದ ಅನುಗ್ರಹ ಹಾಗೂ ಸತ್ ಫಲವನ್ನು ಪಡೆಯಲು ಸಾಧ್ಯ ಎಂದು ಆಶೀರ್ವಚನ ನೀಡಿದರು.
ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಎನ್.ಆರ್ ದಾಮೋದರ ಶರ್ಮ ಬಾರ್ಕೂರು ಧಾರ್ಮಿಕ ಉಪನ್ಯಾಸ ನೀಡಿ ನಾವು ಇನ್ನೂ ಏನೇ ಮಾಡಿದರು ರಾಮ ಮತ್ತೆ ಹುಟ್ಟಿ ಬರ ಲಾರ. ಆದರೆ ರಾಮನ ಗುಣಗಳಿರುವ ಮಕ್ಕಳು ಹುಟ್ಟಿ ಬರಬಹುದು ಅಂತಹ ಸತ್ಪುರುಷರನ್ನು ಪಡೆಯುವುದೇ ನಮ್ಮ ಉದ್ದೇಶವಾಗಲಿ. ಅದರಿಂದ ನಮ್ಮ ಧರ್ಮ ನಮ್ಮ ದೇಶ ಬೆಳಗುವಂತಾಗಲಿ ಎಂದು ಹಾರೈಸಿದರು.
ಯಾಗ ಸಮಿತಿ ಅಧ್ಯಕ್ಷ ರಘುನಾಥ್ ಪೈ ಕುಂಬಳೆ ಉಪಸ್ಥಿತರಿದ್ದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಯೋಗ, ಯಾಗ, ಆಯುರ್ವೇದ ಜಗತ್ತಿಗೆ ಭಾರತ ನೀಡಿದ ಕೊಡುಗೆ. ಇದರ ಮುಖಾಂತರ ಮನಸ್ಸು, ಶರೀರ, ಬುದ್ಧಿಯನ್ನು ಆರೋಗ್ಯಪೂರ್ಣವಾಗಿ ಇರಿಸಬಹುದು, ಹಿತಮಿತ ಋತ ಆಹಾರ ಸೇವನೆ, ನಿತ್ಯ ಅಗ್ನಿಹೋತ್ರ, ನಾಮ ಜಪ, ಪ್ರಾಣಾಯಾಮ ಯೋಗಾಸನಗಳ ಸಾಧನೆಯಿಂದ ಮನೆಯನ್ನು ಸ್ವರ್ಗವಾಗಿಸಬಹುದು, ಇದಕ್ಕೆ ಧನ್ವಂತರಿ, ಪುತ್ರಕಾಮೇಷ್ಠಿಯಾಗ ಹೊಸ ದಿಕ್ಕನ್ನು ಕೊಡುವಂತೆ ಆಗಲಿ ಎಂದು ಪ್ರಾರ್ಥಿಸಿದರು. ಮಂಜುನಾಥ ಮಾನ್ಯ ಸ್ವಾಗತಿಸಿ, ಗಣೇಶ ವತ್ಸ ವಂದಿಸಿದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರನ್ನು ಗಂಗಾಧರ ರೈ ಮಾಸ್ಟರ್ ಮವ್ವಾರು ಗೌರವಿಸಿದರು. ಲೋಕೇಶ್ ಎಂ.ಬಿ ಆಚಾರ್ ಕಂಬಾರು ನಿರೂಪಿಸಿದರು.

You cannot copy contents of this page