ನೆಟ್ಟಣಿಗೆ ಕ್ಷೇತ್ರದ ಅನ್ನ ಛತ್ರಕ್ಕೆ ಧರ್ಮಸ್ಥಳ ಕ್ಷೇತ್ರದಿಂದ 3 ಲಕ್ಷ ರೂ. ಸಹಾಯಧನ ಹಸ್ತಾಂತರ
ಬೆಳ್ಳೂರು: ನೆಟ್ಟಣಿಗೆ ಮಹ ತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅನ್ನಛತ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 3 ಲಕ್ಷ ರೂ. ಸಹಾಯಧನ ಮಂಜೂರು ಮಾಡಲಾಗಿದ್ದು, ಇದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ದೇವಸ್ಥಾನದ ಆಡಳಿತ ಸಮಿತಿಗೆ ಹಸ್ತಾಂತರಿಸಿದರು. ಈ ವೇಳೆ ಯೋಜನಾಧಿಕಾರಿ ಮುಖೇಶ್, ಕಾರಡ್ಕ ವಲಯ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆ ಕುಂಜ, ಕ್ಷೇತ್ರ ಆಡಳಿತ ಸಮಿತಿಯ ಪದ್ಮನಾಭ ಕುಳದಪಾರೆ, ಶಿವಪ್ರಸಾದ್, ಚಂದ್ರಶೇಖರ್ ರೈ ಬಜ, ರಾಜಗೋಪಾಲ ಭಟ್ ಬೆಳೇರಿ, ವಿಶ್ವನಾಥ ಎಂ, ಚನಿಯಪ್ಪ ನಾಯ್ಕ, ಗಂಗಾಧರ ಮಣಿಯಾಣಿ ನೆಟ್ಟಣಿಗೆ, ಎ.ಬಿ. ಗಂಗಾಧರ ಬಲ್ಲಾಳ್, ಸುಧಾಮ ಮಣಿಯಾಣಿ, ರಮೇಶ್ ರೈ, ರಾಮಣ್ಣ ಮೂಲ್ಯ, ಪ್ರತೀಕ್, ದಯಾನಂದ ಎಂ, ಸುರೇಶ್, ಸತೀಶ್, ಶಶಿಕಲ ಉಪಸ್ಥಿತರಿದ್ದರು.