ನೆಟ್ಟಣಿಗೆ ಕ್ಷೇತ್ರದ ಜಾತ್ರಾ ಮಹೋತ್ಸವ ನಾಳೆಯಿಂದ: ಅನ್ನಛತ್ರ ಲೋಕಾರ್ಪಣೆ

ಬೆಳ್ಳೂರು: ನೆಟ್ಟಣಿಗೆ ಮಹ ತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾ ಮಹೋತ್ಸವ ನಾಳೆಯಿಂದ 16ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ನಾಳೆ ಬೆಳಿಗ್ಗೆ 9.15ರಿಂದ ಧ್ವಜಾ ರೋಹಣ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ೮ಕ್ಕೆ ದೇವರ ಶೃಂಗಾರ ಉತ್ಸವಬಲಿ, 13ರಂದು ಬೆಳಿಗ್ಗೆ 7ಕ್ಕೆ ಶ್ರೀ ದೇವರ ಉತ್ಸವಬಲಿ, ತುಲಾಭಾರಸೇವೆ, ರಾತ್ರಿ ೮ಕ್ಕೆ ಶ್ರೀ ದೇವರ ಶೃಂಗಾರ ಉತ್ಸವಬಲಿ, 14ರಂದು ಬೆಳಿಗ್ಗೆ  7ಕ್ಕೆ ಶ್ರೀ ದೇವರ ಉತ್ಸವಬಲಿ, ತುಲಾಭಾರಸೇವೆ, ರಾತ್ರಿ ೮ಕ್ಕೆ ಶ್ರೀ ದೇವರ ನಡು ದೀಪೋತ್ಸವ ನಡೆಯಲಿದೆ.

೧೫ರಂದು ಬೆಳಿಗ್ಗೆ 7ಕ್ಕೆ ಶ್ರೀ ದೇವರ ಉತ್ಸವಬಲಿ, ತುಲಾಭಾರಸೇವೆ, ರಾತ್ರಿ ೮ಕ್ಕೆ ಶ್ರೀ ದೇವರ ಶೃಂಗಾರ ಉತ್ಸವಬಲಿ, ಶಯನ ಸೇವೆ, ೧೬ರಂದು ಬೆಳಿಗ್ಗೆ ಶಯನೋದ್ಘಾಟನೆ, ರಾತ್ರಿ 9ಕ್ಕೆ ಶ್ರೀ ದೇವರ ಶೃಂಗಾರ ಉತ್ಸವ ಬಲಿ, ವಸಂತ ಕಟ್ಟೆಪೂಜೆ, ಅವಭೃತಸ್ನಾನ, ಶ್ರೀ ದುರ್ಗಾಸೇವೆ, ಬೆಡಿ ಸೇವೆ, ಶ್ರೀ ದೇವರ ಮಹಾದರ್ಶನ ಬಲಿ, ಬಟ್ಟಲುಕಾಣಿಕೆ, ಧ್ವಜಾವರೋಹಣ ನಡೆಯಲಿದೆ.

ಉತ್ಸವದಂಗವಾಗಿ ವಿವಿಧ ಭಾಗಗಳಿಂದ ಹೊರೆಕಾಣಿಕೆ ಮೆರವಣಿಗೆ, ಶ್ರೀ ಕ್ಷೇತ್ರದ ಅನ್ನಛತ್ರ ಲೋಕಾರ್ಪಣೆ, ಫೆ 18ರಂದು ಸಂಜೆ ೪ಕ್ಕೆ ಹುಲಿ ಭೂತ, ಪಟ್ಟದರಸು ಬೀರ್ನಾಳ ದೈವದ ನೇಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ 14ರಂದು ರಾತ್ರಿ 7ರಿಂದ ಓಂ ಶಿವ ನೆಟ್ಟಣಿಗೆ ಮಕ್ಕಳಿಂದ ನೃತ್ಯ ವೈಭವ, 8.30ರಿಂದ ನಾಟ್ಯ ಮಯೂರಿ ಕಾರ್ಯಕ್ರಮ, 16ರಂದು ರಾತ್ರಿ 7ರಿಂದ ಕಡುಮನೆ ವನದುರ್ಗಾ ತಂಡದಿಂದ ಕೈಕೊಟ್ಟುಕಳಿ,  ಯಕ್ಷ ನಾಟ್ಯ ವೈಭವ, ವಿದುಷಿ ಶಾರದಾ ಮಣಿಶೇಖರ್ ಅವರ ಶಿಷ್ಯ ವೃಂದದಿಂದ ಭರತನಾಟ್ಯ, ೯.೪೫ರಿಂದ ನೃತ್ಯ-ಗಾನ ವೈಭವ ನಡೆಯಲಿದೆ.

You cannot copy contents of this page