ನೆಲ್ಲಿಕಟ್ಟೆ ನಿವಾಸಿ ಯುವತಿ ಬೆಂಗಳೂರಿನಲ್ಲಿ ನಿಗೂಢ ರೀತಿಯಲ್ಲಿ ಸಾವು

ಬದಿಯಡ್ಕ: ನೆಲ್ಲಿಕಟ್ಟೆ ಬಳಿಯ ನಿವಾಸಿಯಾದ ಯುವತಿ ಬೆಂಗಳೂರಿನಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ನೆಲ್ಲಿಕಟ್ಟೆ ಬಳಿಯ  ಸಾಲತ್ತಡ್ಕ ಎಂಬಲ್ಲಿನ ಅಬ್ದುಲ್ ಮುತ್ತಲೀಫ್ ಎಂಬವರ ಪುತ್ರಿ ಆಯಿಶತ್ ಶಾನಿಯ ಬಾನು (೧೭) ಮೃತ ಯುವತಿ. ಈಕೆ ಬೆಂಗಳೂ

ರಿನ ಕಮಲನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದಳು. ಅಲ್ಲಿ ಮೊನ್ನೆ ಆಕೆ ಮೃತಪಟ್ಟ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದೇ ವೇಳೆ ಸಾವಿನಲ್ಲಿ ನಿಗೂಢತೆ ಗಳಿರುವುದಾಗಿ ಹೇಳಲಾಗುತ್ತಿದ್ದು ಈ ಬಗ್ಗೆ ಬೆಂಗಳೂರು ಪೊಲೀಸರು  ಕೇಸು ದಾಖಲಿಸಿಕೊಂಡಿ ರುವುದಾಗಿ ತಿಳಿದುಬಂದಿದೆ. ಮೃತದೇಹವನ್ನು ಊರಿಗೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು.

ಮೃತಳು ತಂದೆ, ತಾಯಿ ಫೌಸಿಯ, ಸಹೋದರ-ಸಹೋ ದರಿಯರಾದ ಸಲ್ಮಾನ್ ಫಾರಿಸ್, ಖದೀಜತ್ ಇಹ್‌ಸಾನ, ಉಮರ್ ಹಾತಿಂ, ಅಲ್‌ಸಾಬ್ ಸುಲ್ತಾನ್ ಹಾಗೂ  ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.

You cannot copy contents of this page