ನೆಲ್ಲಿಕುಂಜೆ ಲೈಟ್ ಹೌಸ್ ಮುಂದೆ ಬೀಚ್ ಪಾರ್ಕ್‌ಗೆ ಕೇಂದ್ರ ಅನುಮತಿ
ಕಾಸರಗೋಡು: ಕಾಸರಗೋಡು ನಗರದ ನೆಲ್ಲಿಕುಂಜೆಯ ಲೈಟ್ ಹೌಸ್ (ದೀಪಸ್ತಂಭ)ನ ಮುಂದೆ ಬೀಚ್‌ಪಾರ್ಕ್ ನಿರ್ಮಿಸಲು ಕೇಂದ್ರ ಸರಕಾರದ ಅನುಮತಿ ಲಭಿಸಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಕಾರದೊಂದಿಗೆ ಕಾಸರಗೋಡು ನಗರಸಭೆ ಇಲ್ಲಿ ಬೀಚ್ ಪಾರ್ಕ್ ನಿರ್ಮಿಸಲಿದೆ. ಇದಕ್ಕೆ ಕೇಂದ್ರ ಸರಕಾರದ ಅನುಮತಿ ಲಭಿಸಿದೆ ಎಂದು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ತಿಳಿಸಿದ್ದಾರೆ.
ಬೀಚ್ ಪಾರ್ಕ್ ನಿರ್ಮಿಸಲು ೧.೭೫ ಕೋಟಿ ರೂ.ಗಳ ವೆಚ್ಚ ನಿರೀಕ್ಷಿಸಲಾಗಿದೆ. ಈ ಬೀಚ್‌ನಲ್ಲಿ ಕೆಫೆ, ಮಕ್ಕಳಿಗೆ ಆಟದ ಸ್ಥಳ, ನಡೆಹಾದಿ, ಪಾರ್ಕಿಂಗ್ ಸೌಕರ್ಯ, ಶೌಚಾಲಯ ಬ್ಲೋಕ್, ಸೆಲ್ಫಿ ಪಾಯಿಂಟ್, ಸೋಲಾರ್ ಲೈಟ್‌ಗಳು ಹಾಗೂ ಪ್ರತ್ಯೇಕ ಶೆಡ್ ಆಸನಗಳನ್ನು ನಿರ್ಮಿಸಲಾಗುವುದು.
ಕಾಸರಗೋಡು ಬೀಚ್‌ಗೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡುವ ಉದ್ದೇಶವನ್ನು ಈ ಯೋ ಜನೆ ಮೂಲಕ ನಗರಸಭೆ ಹಾಕಿಕೊಂಡಿದೆ. ಮಾತ್ರವಲ್ಲ ಇಲ್ಲಿ ಬೀಚ್ ಫೆಸ್ಟ್‌ನ್ನೂ ನಡೆಸಲಾಗುವುದು. ಇದರಂತೆ ಬೀಚ್ ಗೇಮ್ಸ್‌ಗಳು, ಫುಡ್ ಫೆಸ್ಟಿವಲ್ (ಆಹಾರೋತ್ಸವ), ಕಲಾ ಕಾರ್ಯ ಕ್ರಮಗಳನ್ನು ನಡೆಸುವ ತೀರ್ಮಾನವನ್ನೂ ನಗರಸಭೆ ಕೈಗೊಂಡಿದೆ. ಬೀಚ್ ಪಾರ್ಕ್ ನಿರ್ಮಿ ಸುವ ಸ್ಥಳಕ್ಕೆ ನಗರಸಭಾ ಅದ್ಯಕ್ಷ ಅಬ್ಬಾಸ್ ಬೀಗಂ, ನಗರಸಭಾ ಕಾರ್ಯದರ್ಶಿ ಪಿ.ಎ. ಜಸ್ಟೀನ್, ನಗರಸಭಾ ಇಂಜಿನಿಯರ್, ಎಲ್.ಡಿ. ದಿಲೀಶ್ ಮೊದಲಾದವರು ಸಂದರ್ಶಿಸಿ ಯೋಜನೆ ಬಗ್ಗೆ ಅವಲೋಕನೆ ನಡೆಸಿದರು.