ನೇಣುಬಿಗಿದು ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಮೃತ್ಯು

ಕಾಸರಗೋಡು: ಕ್ಷುಲ್ಲಕ ಕಾರಣಕ್ಕೆ  ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ ಪಟ್ಟಳು. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಅರಮಂಗಾನ ಉಲೂಜಿಯ ಸುಮಲತಾ ಎಂಬ ವರ ಪುತ್ರಿ ರಂಜಿನಿ ಮೃತಪಟ್ಟ ಯುವತಿ.  ಎಪ್ರಿಲ್ ೨೮ರಂದು ರಾತ್ರಿ ರಂಜಿನಿ ಶೌಚಾಲಯದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿ ದ್ದಳು. ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೂ ನಂತರ ಅಲ್ಲಿಂದ ಕಣ್ಣೂರಿನ ಆಸ್ಪತ್ರೆಗೂ ಸ್ಥಳಾಂತರಿಸಲಾಗಿತ್ತು.

You cannot copy contents of this page