ನೇಪಾಳದಲ್ಲಿ ಮತ್ತೆ ಭೂಕಂಪ
ಕಾಠ್ಮಂಡು: ನೇಪಾಳದಲ್ಲಿ ಇಂದು ಮುಂಜಾನೆ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ೪.೫ ತೀವ್ರತೆ ದಾಖಲಾಗಿದೆ ಎಂದು ನೇಪಾಳ ಭೂಕಂಪ ಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ನೇಪಾಳದ ಮಕ್ವಾನ್ಪುರ ಜಿಲ್ಲೆಯ ಚಟ್ಲಾಂಗ್ನೆನಲ್ಲಿ ಭೂಕಂಪ ಸಂಭವಿಸಿದೆ. ಯಾವುದೇ ಸಾವು ನೋವು ವರದಿಯಾಗಿಲ್ಲ.
ನವೆಂಬರ್ ೩ರಂದು ಇಡೀ ನೇಪಾಳವನ್ನೇ ನಡುಗಿಸಿದ ೬.೪ ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದರಲ್ಲಿ ಭಾರೀ ಜೀವ ಹಾನಿ ಮತ್ತು ಆಸ್ತಿ ನಷ್ಟಉಂಟಾಗಿತ್ತು. ಅದರ ಬೆನ್ನಲ್ಲೇ ಇಂದು ಮತ್ತೆ ಭೂಕಂಪ ಉಂಟಾಗಿದೆ.