ನೇಮಕಾತಿ ವಂಚನೆ: ಬಂಧಿತ ಅಖಿಲ್ ಸಜೀವ್‌ನಿಂದ ನಿರ್ಣಾಯಕ ಮಾಹಿತಿ ಲಭ್ಯ

ತಿರುವನಂತಪುರ: ಆರೋಗ್ಯ ಇಲಾಖೆಗೆ ಸಂಬಂಧಿಸಿ ನಡೆದ ನೇಮಕಾತಿ ವಂಚನೆ ಪ್ರಕರಣದಲ್ಲಿ ಸೆರೆಗೀಡಾದ ಅಖಿಲ್ ಸಜೀವ್‌ನಿಂದ ನಿರ್ಣಾಯಕ ಮಾಹಿತಿಗಳು ಲಭಿಸಿದೆಯೆಂದು ಪ್ರತ್ಯೇಕ ತನಿಖಾ ತಂಡ ತಿಳಿಸಿದೆ. ವಂಚನೆಯಲ್ಲಿ ಪ್ರಧಾನ ಪಾತ್ರ ವಹಿಸಿದವರು ಕಲ್ಲಿಕೋಟೆಯ ನಿವಾಸಿಗಳಾದ ಬಾಸಿತ್, ರಹೀಸ್, ಲೆನಿನ್‌ರಾಜ್, ಶ್ರೀರೂಪ್ ಎಂಬಿವರೆಂದು ಈತ ಹೇಳಿಕೆಯಲ್ಲಿ ತಿಳಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ತಿರುವನಂ ತಪುರದಲ್ಲಿ ನಡೆದ ವ್ಯಕ್ತಿಪಲ್ಲಟ  ಹಿಂದೆಯೂ ಇದೇ ತಂಡ ಕಾರ್ಯಾ ಚರಿಸಿದೆಯೆಂದು ಸಂಶಯಿಸಲಾಗಿದೆ. ಈ ತಂಡ ರಾಜ್ಯದಾದ್ಯಂತ ವಂಚನೆ ನಡೆಸಿದೆಯೆಂದು ತಿಳಿಸಲಾಗಿದೆ. ಅಖಿಲ್ ಸಜೀವ್‌ನನ್ನು ಇಂದು ಪತ್ತನಂತಿಟ್ಟ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ರಿಮಾಂಡ್ ರಿಪೋರ್ಟ್‌ನೊಂದಿಗೆ ಏಳು ದಿನಗಳ ಕಸ್ಟಡಿಗಾಗಿ ಅರ್ಜಿ ಸಲ್ಲಿಸಲಾಗುವುದೆಂದು ತಿಳಿದು ಬಂದಿದೆ.

ಸಿಐಟಿಯು ಫಂಡ್ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಸ್ತುತ ನಿಶಿಲ್ ಸಜೀವ್‌ನನ್ನು ಬಂಧಿಸಲಾ ಗಿದೆ. ನಿನ್ನೆ ಬೆಳಿಗ್ಗೆ ತೇನಿಯಿಂದ ಈತನನ್ನು ಸೆರೆಹಿಡಿಯಲಾಗಿದೆ.

You cannot copy contents of this page