ನೈತಿಕ ಪೊಲೀಸ್‌ಗಿರಿ: ಯುವಕನಿಗೆ ತಂಡದಿಂದ ಹಲ್ಲೆ

ಉಪ್ಪಳ:    ಯುವಕನನ್ನು ತಂಡ ವೊಂದು  ನೈತಿಕ ಪೊಲೀಸ್‌ಗಿರಿಯ ಹೆಸರಲ್ಲಿ ದಾರಿಯಲ್ಲಿ ತಡೆದು ನಿಲ್ಲಿಸಿ ಹಾಗೂ ವಾಸಸ್ಥಳದಲ್ಲಿ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ.  ಈ ಸಂಬಂಧ ಓರ್ವನನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ಉಪ್ಪಳ ರೈಲು ನಿಲ್ದಾಣ ಬಳಿ  ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಇಬ್ರಾಹಿಂ ಕರೀಂ (30) ಎಂಬವರಿಗೆ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ. ನಿನ್ನೆ ಮುಂಜಾನೆ  2 ಗಂಟೆ ವೇಳೆ ಸಿನಿಮಾ ವೀಕ್ಷಿಸಿ  ವಾಸಸ್ಥಳಕ್ಕೆ ನಡೆದು ಹೋಗುತ್ತಿದ್ದ ಇಬ್ರಾಹಿಂ ಕರೀಂರನ್ನು ಇಬ್ಬರು ವ್ಯಕ್ತಿಗಳು ಉಪ್ಪಳ ರೈಲು ನಿಲ್ದಾಣ ರಸ್ತೆಯಲ್ಲಿ ತಡೆದು ನಿಲ್ಲಿಸಿ ಪ್ರಶ್ನಿಸಿ ಹಲ್ಲೆಗೈದಿ ದ್ದಾರೆನ್ನಲಾಗಿದೆ.  ಬಳಿಕ  ಕೊಠಡಿಗೆ ಮರಳಿದ ಇಬ್ರಾಹಿಂ ಕರೀಂರಿಗೆ   ಮೊದಲು ಹಲ್ಲೆಗೈದ ಇಬ್ಬರ ಸಹಿತ 5 ಮಂದಿ ತಂಡ ತಲುಪಿ   ಹಲ್ಲೆಗೈದಿದ್ದು ತಲೆಯನ್ನು ಗೋಡೆಗೆ ಬಡಿದು ಗಾಯಗೊಳಿಸಿರುವುದಾಗಿ  ದೂರಲಾಗಿದೆ. ಗಾಯಗೊಂಡ  ಇವರು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

You cannot copy contents of this page