ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರ್ಥಿಕ ವಂಚನೆ ನಡೆಸಿದ ಯುವತಿ ಸೆರೆ

ಕಾಸರಗೋಡು: ಆರ್ಥಿಕ ವಂಚನೆ ಪ್ರಕರಣದಲ್ಲಿ ನ್ಯಾಯಾಲ ಯಕ್ಕೆ ಹಾಜರಾಗದೆ ತಲೆಮರೆಸಿ ಕೊಂಡಿದ್ದ ಯುವತಿಯನ್ನು ಪೊಲೀ ಸರು ಬಂಧಿಸಿದ್ದಾರೆ. ಕೋಟಯಂ ಐಮಾನಂ ಅಂಬಾಡಿಕವಳ ನಿವಾಸಿ ವೃಂದಾ ರಾಜೇಶ್‌ಳನ್ನು ಅಂಬಲತ್ತರ ಪೊಲೀಸರು ಬಂಧಿಸಿದ್ದಾರೆ. ಇವಳ ವಿರುದ್ಧ ಅಂಬಲತ್ತರ ಠಾಣೆಯಲ್ಲಿ 49 ಪ್ರಕರಣಗಳು ಜ್ಯಾರಿಯಲ್ಲಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಗಳಲ್ಲಿ 100ರಷ್ಟು ಪ್ರಕರಣಗಳು ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಯ್ಯನ್ನೂರಿನಲ್ಲಿ ಅಡಗಿ ವಾಸಿಸುತ್ತಿದ್ದ ಈಕೆಯನ್ನು ಇನ್ಸ್‌ಪೆಕ್ಟರ್ ಕೆ.ಪಿ. ಶೈನ್‌ರ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ. ಸಿಖ್‌ಟೆಕ್ ಎಂಬ ಹೆಸರಲ್ಲಿ ಚಿಟ್ಟಿ ಕಂಪೆನಿ ನಡೆಸಿ ಕಾಸರಗೋಡು ಜಿಲ್ಲೆಯ ಹಲವು ಭಾಗಗಳಲ್ಲಿ ಜನರಿಂದ ಹಣ ಪಡೆದು ವಂಚಿಸಿರುವುದಾಗಿ ಕೇಸು ದಾಖಲಿಸ ಲಾಗಿತ್ತು. ತಳಿಪರಂಬ ಕೇಂದ್ರವಾಗಿ ಚಿಟ್ಟಿ ಕಂಪೆನಿ ಕಾರ್ಯಾಚರಿಸುತ್ತಿತ್ತು. ಪತಿ ರಾಜೇಶ್ ಜೊತೆ ಸೇರಿ ಸಾವಿ ರಾರು ಮಂದಿಯಿಂದ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿರುವುದಾಗಿ ದೂರು ನೀಡಲಾಗಿತ್ತು.

You cannot copy contents of this page