ನ್ಯೂಯೋರ್ಕ್‌ನ ನ್ಯೂಸ್ ವೀಕ್ ಮಾಸಿಕದ ಮುಖಪುಟದಲ್ಲಿ ಸ್ಥಾನ ಪಡೆದ ಪ್ರಧಾನಿ ಮೋದಿ
ಹೊಸದಿಲ್ಲಿ: ನ್ಯೂಯಾರ್ಕ್ ಕೇಂದ್ರೀಕರಿಸಿ ಕಾರ್ಯಾಚರಿಸುವ ನ್ಯೂಸ್ ವೀಕ್ ಮಾಸಿಕದ ಮುಖಪುಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಥಾನ ಗಳಿಸಿದ್ದಾರೆ. ಇಂದಿರಾ ಗಾಂಧಿಯ ಬಳಿಕ ನ್ಯೂಸ್ ವೀಕ್ ಕವರ್‌ಪೇಜ್‌ನಲ್ಲಿ ಸ್ಥಾನ ಪಡೆದಿರುವ ಭಾರತದ ಮೊದಲ ಪ್ರಧಾನಮಂತ್ರಿ ನರೇಂದ್ರ ಮೋದಿಯಾಗಿದ್ದಾರೆ. ೧೯೬೬ ಎಪ್ರಿಲ್ ತಿಂಗಳ ಸಂಚಿಕೆಯ ಮುಖಪುಟದಲ್ಲಿ ಇಂದಿರಾಗಾಂಧಿ ಯವರ ಭಾವಚಿತ್ರವನ್ನು ಮುದ್ರಿಸಲಾಗಿತ್ತು.
ಭಾರತ-ಚೀನಾ ಗಡಿಪ್ರದೇಶದ ಪರಿಸ್ಥಿತಿ, ಅಯೋಧ್ಯೆಯ ರಾಮಮಂದಿರ, ಆರ್ಟಿಕಲ್ ೩೭೦ ಎಂಬಿವುಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ನ್ಯೂಸ್ ವೀಕ್‌ನ ಸಂದರ್ಶನದಲ್ಲಿ ಮೋದಿಯವರು ಎದುರಿಸಿದ್ದರು. ಉಭಯ ರಾಷ್ಟ್ರಗಳ ಸಮಸ್ಯೆಗಳನ್ನು ಪರಿಹರಿಸಲು ಭಾರತ-ಚೀನಾ ಗಡಿ ಪ್ರದೇಶದ ಪರಿಸ್ಥಿತಿಯನ್ನು ತುರ್ತಾಗಿ ಗಮನಿಸಬೇಕಾಗಿದೆಯೆಂದು ನರೇಂದ್ರಮೋದಿಯವರು ಸಂದರ್ಶನದಲ್ಲಿ ತಿಳಿಸಿದ್ದಾರೆ. ಉಭಯ ದೇಶಗಳು ಪ್ರಧಾನ ಸಂಬಂಧವನ್ನು ಹೊಂದಿವೆಯೆಂದೂ ಸುಭದ್ರವಾದ ಭಾರತ-ಚೀನಾ ಸಂಬಂಧ ಇಡೀ ವಿಶ್ವಕ್ಕೇ ಅನಿವಾರ್ಯವಾಗಿದೆಯೆಂದು ಅವರು ತಿಳಿಸಿದರು.
ಭಾರತಕ್ಕೆ ಸಂಬಂಧಿಸಿ ಯೂ ಚೀನಾದೊಂದಿಗಿನ ಸಂಬಂಧ ಮಹತ್ವದ್ದಾಗಿದೆ. ನಮ್ಮ ಗಡಿಯಲ್ಲಿ ಮುಂದುವರಿಯುತ್ತಿರುವ ಪರಿಸ್ಥಿತಿಯನ್ನು ತುರ್ತಾಗಿ ಪರಿಹರಿಸ ಬೇಕಾಗಿದೆ. ಆ ಮೂಲಕ ನಮ್ಮ ಉಭಯ ದೇಶಗಳ ವ್ಯವಹಾರಗಳನ್ನು ಸುಗಮಗೊಳಿಸಬೇಕಾಗಿದೆ ಎಂದೂ ಮೋದಿ ತಿಳಿಸಿದ್ದಾರೆ.