ಪಂಜಾಬ್‌ನಲ್ಲಿ ಎಎಪಿಯಲ್ಲಿ ಬಿಕ್ಕಟ್ಟು: 30 ಶಾಸಕರಿಂದ ರಾಜೀನಾಮೆ ಬೆದರಿಕೆ
ನವದೆಹಲಿ: ದೆಹಲಿ ವಿಧಾನಸ ಭೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಎಎಪಿ) ಪರಾಭ ವಗೊಂ ಡು ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಎಎಪಿ ನೇತೃತ್ವದ ಪಂಜಾಬ್ ಸರಕಾರದಲ್ಲೂ ಭಾರೀ ಬಿಕ್ಕಟ್ಟು ತಲೆಯೆತ್ತಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಎಪಿಯ 30 ಶಾಸಕರು ಪ್ರತ್ಯಕ್ಷವಾಗಿ ರಂಗಕ್ಕಿಳಿದಿದ್ದಾರೆ. ಆದರೆ ಇವರ ಬೇಡಿಕೆ ಯನ್ನು ಮುಖ್ಯಮಂತ್ರಿ ಹಾಗೂ ಅವರ ಬಣ ಸಾರಾಸಗಟಾಗಿ ತಿರಸ್ಕರಿಸಿದ್ದು, ಇದು ಪಕ್ಷದೊಳಗೆ ಆಂತರಿಕ ಕಚ್ಚಾಟಕ್ಕೂ ದಾರಿಮಾಡಿಕೊಟ್ಟಿದೆ.
ಇದೇ ಸಂದರ್ಭದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ದಿಲ್ಲಿಯನ್ನು ಬಿಟ್ಟು ಎಎಪಿಯ ಪಂಬಾಬ್ ಘಟಕದ ನಾಯಕತ್ವ ವಹಿಸಿ ಪಂಜಾಬ್‌ನ ಮುಖ್ಯಮಂತ್ರಿಯಾಗುವ ಯತ್ನದಲ್ಲೂ ತೊಡಗಿದ್ದಾರೆ.