ಪಂಜಾಬ್‌ನಲ್ಲಿ ವಿ.ಎಚ್.ಪಿ ಮುಖಂಡ ವಿಕಾಸ್ ಬಗ್ಗಾ ಹತ್ಯೆ

ರೂಪ್‌ನಗರ: ಪಂಜಾಬ್‌ನ ರೂಪ್‌ನಗರ ನಂಗಲ್ ಪಟ್ಟಣದಲ್ಲಿ ವಿಶ್ವಹಿಂದೂ ಪರಿಷತ್ (ವಿಎಚ್ ಪಿ) ಮುಖಂಡ ವಿಕಾಸ್ ಬಗ್ಗಾರನ್ನು ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ.   ವಿಎಚ್‌ಪಿಯ ನಂಗಲ್ ಘಟಕದ ಅಧ್ಯಕ್ಷರಾಗಿದ್ದ ಬಗ್ಗೆ ರೂಪ್‌ನಗರ ರೈಲು ನಿಲ್ದಾಣದ ಬಳಿ ಇರುವ  ಅವರ ಅಂಗಡಿಗೆ ನುಗ್ಗಿದ ಅಕ್ರಮಿಗಳು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾ ಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಆರೋಪಿಗಳ ಪತ್ತೆಗಾಗಿ ಸಮೀಪ ಪ್ರೇದಶಗಳ ಸಿಸಿಟಿವಿ ದೃಶ್ಯಾವಳಿ ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಗ್ಗಾರ ಹತ್ಯೆಯನ್ನು ಪ್ರತಿಭಟಿಸಿ ವಿಎಚ್‌ಪಿ ಪ್ರತಿಭಟನೆ ಆರಂಭಿಸಿದೆ.

You cannot copy contents of this page