ಶಬರಿಮಲೆ: ಪಂಪಾಸ್ನಾನ ಬಳಿಕ ತೀರ್ಥಾಟಕರು ನದಿಯಲ್ಲಿ ಬಟ್ಟೆಬರೆ ಉಪೇಕ್ಷಿಸಕೂಡದೆಂದು ದೇವಸ್ವಂ ಮಂಡಳಿ ಮುನ್ನೆಚ್ಚರಿಕೆ ನೀಡಿದೆ. ಕೆಲವು ಭಕ್ತರು ತಾವು ಬಳಸಿದ ಬಟ್ಟೆಬರೆಗಳನ್ನು ನೀರಿನಲ್ಲಿ ಉಪೇಕ್ಷಿಸುತ್ತಿರುವುದು ಕಂಡುಬ ಂದಿದೆ, ಇದು ನದಿಯಲ್ಲಿ ತ್ಯಾಜ್ಯ ಸೃಷ್ಟಿಯಾಗಲು ಕಾರಣವಾಗುತ್ತಿದೆ. ನದಿಯಲ್ಲಿ ಬಟ್ಟೆಬರೆ ಉಪೇಕ್ಷಿಸ ಕೂಡದೆಂದು ವಿವಿಧ ಭಾಷೆಗಳಲ್ಲಿ ಬರೆಯಲಾದ ಸೂಚನಾಫಲಕ ಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಆದರೆ ಆ ಬಗ್ಗೆ ಗಮನಹರಿಸದೆ ಕೆಲವರು ನದಿಯಲ್ಲೇ ಬಟ್ಟೆಬರೆ ಉಪೇ ಕ್ಷಿಸುತ್ತಿದ್ದಾರೆ. ಅದನ್ನು ಕಡ್ಡಾಯ ವಾಗಿ ತಡೆಯಲಾಗು ವುದೆಂದು ತಿಳಿಸಲಾಗಿದೆ.
