ಪಚ್ಚಂಬಳದಲ್ಲಿ ಮನೆಗೆ ನುಗ್ಗಿದ ಕಳ್ಳರು

ಕುಂಬಳೆ:  ಪಚ್ಚಂಬಳದಲ್ಲಿ ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿದ್ದಾರೆ. ಪಚ್ಚಂಬಳ ಕಾಂದಲ್‌ನ ಅಬ್ದುಲ್ ರಹ್ಮಾನ್‌ರ ಮನೆಗೆ ಕಳ್ಳರು ನುಗ್ಗಿದ್ದಾರೆ. ಅಬ್ದುಲ್ ರಹ್ಮಾನ್ ಮನೆಗೆ ಬೀಗ ಜಡಿದು ಕುಟುಂಬ ಸಮೇತ ಮೊನ್ನೆ ಪುತ್ರನ ಮನೆಗೆ ತೆರಳಿದ್ದರು.ನಿನ್ನೆ ಅವರು ಮgಳಿದಾಗ ಮನೆಗೆ ಕಳ್ಳರು ನುಗ್ಗಿದ ವಿಷಯ ಅರಿವಿಗೆ ಬಂದಿದೆ. ಪಿಕ್ಕಾಸು ಬಳಸಿ ಬಾಗಿಲಿನ ಬೀಗ ಮುರಿದಿರುವುದಾಗಿ ತಿಳಿದುಬಂದಿದೆ. ಮನೆಯೊಳಗೆ ಚೆಲ್ಲಾಪಿಲ್ಲಿಗೊಳಿಸಿದ್ದು ಆದರೆ ಯಾವುದೇ ವಸ್ತುಗಳು ಕಳವಿಗೀಡಾಗಿಲ್ಲವೆನ್ನಲಾಗಿದೆ.

You cannot copy contents of this page