ಪಟಾಕಿ ತಯಾರಿ ಕೇಂದ್ರಕ್ಕೆ ಪೊಲೀಸ್ ದಾಳಿ

ಕುಂಬಳೆ: ಕಿದೂರು ಅರ್ತಿಲದಲ್ಲಿ ಕಾರ್ಯಾಚರಿಸುವ ಪಟಾಕಿ ತಯಾರಿ ಕೇಂದ್ರಕ್ಕೆ ನಿನ್ನೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿಂದ ಅನುಮತಿಗಿಂ ತಲೂ ಹೆಚ್ಚು ದಾಸ್ತಾನಿರಿಸಿದ್ದ ೧೦.೧೨ ಕಿಲೋ ಸ್ಪೋಟಕದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಟಾಕಿ ತಯಾರಿ ಕೇಂದ್ರದ ಮೂಲಕ ಆರಿಕ್ಕಾಡಿಯ ಅಬೂಬಕರ್ ಸಿದ್ದಿಕ್ (೪೩) ವಿರುದ್ಧ ಕೇಸು ದಾಖಲಿ ಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅನುಮತಿಗಿಂ ತಲೂ ಹೆಚ್ಚು ಸ್ಪೋಟಕವಸ್ತು ದಾಸ್ತಾನಿರಿಸಲಾ ಗಿದೆಯೆಂಬ ಗುಪ್ತ ಮಾಹಿತಿಯ ಆಧಾರದಲ್ಲಿ ಕುಂಬಳೆ ಎಸ್.ಐ ಟಿ.ಎಂ. ವಿಪಿನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ವಿದ್ಯುತ್ ದೀಪ, ಅಲಂಕಾರಗಳಿಂದ

ಕಂಗೊಳಿಸುತ್ತಿರುವ ಕುಂಬಳೆ ಪೇಟೆ

ಕುಂಬಳೆ: ಈ ತಿಂಗಳ ೧೬ರಿಂದ ೨೯ರವರೆಗೆ ನಡೆಯಲಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುನಃ ಪ್ರತಿಷ್ಠೆ ಮತ್ತು ವಾರ್ಷಿಕ ಜಾತ್ರೆಯ ಅಂಗವಾಗಿ ಕುಂಬಳೆ ಪೇಟೆಯನ್ನು ವಿದ್ಯುತ್ ದೀಪ, ಅಲಂಕಾರಗಳಿಂದ ಶೃಂಗರಿಸಲಾಗಿದೆ. ಕುಂಬಳೆ ಪೇಟೆಯಿಂದ ಭಾಸ್ಕರನಗರವರೆಗೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಿನಗರ ಹಾಗೂ ಆರಿಕ್ಕಾಡಿವರೆಗೂ, ಒಳ ಪ್ರದೇಶಗಳಲ್ಲೂ ಅಲಂಕರಿಸಲಾಗಿದೆ.

You cannot copy contents of this page