ಪತಿ, ಅತ್ತೆಯಿಂದ ಹಿಂಸೆ: ಪುತ್ರನೊಂದಿಗೆ ಹೊಳೆಗೆ ಹಾರಿದ ಯುವತಿಯ ಪತ್ರ ಬಹಿರಂಗ
ಕಣ್ಣೂರು: ಚೆಂಬಲ್ಲಿಕುಂಡ್ ಹೊಳೆಗೆ ಹಾರಿ ಮೃತಪಟ್ಟ ರೀಮರ ಆತ್ಮಹತ್ಯಾ ಪತ್ರ ಬಹಿರಂಗಗೊಂಡಿದೆ. ತನ್ನ ಹಾಗೂ ಪುತ್ರನ ಸಾವಿಗೆ ಹೊಣೆ ಪತಿ ಕಮಲ್‌ರಾಜ್ ಹಾಗೂ ಪತಿಯ ತಾಯಿ ಪ್ರೇಮರಾಗಿ ದ್ದಾರೆಂದು ಆತ್ಮಹತ್ಯಾ ಪತ್ರದಲ್ಲಿ ಬರೆಯಲಾಗಿದೆ. ತಾಯಿಯ ಮಾತು ಕೇಳಿ ತನ್ನನ್ನು ಹಾಗೂ ಪುತ್ರನನ್ನು ಮನೆಯಿಂದ ಹೊರ ಹಾಕಿ ಹೋಗಿ ಸಾಯಲು ಹೇಳಿರು ವುದಾಗಿ ಪತ್ರದಲ್ಲಿ ಬರೆಯ ಲಾಗಿದೆ. ಪತಿಯ ತಾಯಿ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದು, ಕಾನೂನು ವ್ಯವಸ್ಥೆಯಲ್ಲಿ ತನಗೆ ನಂಬಿಕೆ ಇಲ್ಲದಾಗಿದೆ ಎಂದು ಬರೆಯಲಾಗಿದೆ.
ತನ್ನ ಹಾಗೂ ಪತಿಯ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಿ ಹೊಡೆದಾ ಡಿಸಲು ಪ್ರೇರಣೆ ನೀಡಿ ನನ್ನ ಬದುಕನ್ನು ಈ ಸ್ಥಿತಿಗೆ ತಂದಿರುವುದಾಗಿ ಯೂ, ಯಾವುದೇ ಮಹಿಳೆಗೆ ನ್ಯಾಯ ಲಭಿಸು ತ್ತಿಲ್ಲವೆಂದು ಆಕೆ ಪತ್ರದಲ್ಲಿ ಬರೆದಿದ್ದಾರೆ.