ಪತಿ ಕೊಲ್ಲಿಗೆ ಮರಳಲಿರುವ ಮಧ್ಯೆ ಪತ್ನಿ ನಿಗೂಢ ರೀತಿಯಲ್ಲಿ ಸಾವು

ಕಾಸರಗೋಡು: ಒಂದು ವರ್ಷದ ಹಿಂದೆ ವಿವಾಹಿತೆಯಾದ ಯುವತಿ ನಿಗೂಢ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ವೆಸ್ಟ್ ಎಳೇರಿ ಪಂಚಾಯತ್‌ನ ಕೋಟಮಲ, ಅಡುಕ್ಕಳಂಬಾಡಿಯ ಜೋಬಿನ್ಸ್ ಕೆ. ಮೈಕಲ್‌ರ ಪತ್ನಿ ಪತ್ತನಂತಿಟ್ಟ ತೇಂಙಪ್ಪಾರ ನಿವಾಸಿ ದರ್ಶನ (30) ಮೃತಪಟ್ಟ ಯುವತಿ. ಬುಧವಾರ ರಾತ್ರಿ 11 ಗಂಟೆ ವೇಳೆಗೆ ಅಸ್ವಸ್ಥತೆ ಕಂಡು ಬಂದ ಹಿನ್ನೆಲೆಯಲ್ಲಿ ಇವರನ್ನು ಚೆರುಪುಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆವಾಗಲೇ ಸಾವು ಸಂಭವಿಸಿತ್ತು. ಚಿತ್ತಾರಿಕಲ್ ಪೊಲೀಸರು ಈ ಬಗ್ಗೆ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದರು. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಯುವ ಪೋಸ್ಟ್ ಮಾರ್ಟಂನ ಬಳಿಕವೇ ಸಾವಿಗೆ ಕಾರಣವೇನೆಂದು ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೈಹಿಕ ಅಸ್ವಸ್ಥತೆ ಹಿನ್ನೆಲೆಯಲ್ಲಿ ದರ್ಶನ ಗುರುವಾರ ಬೆಳಿಗ್ಗೆ ವೆಳ್ಳರಿಕುಂಡ್‌ನ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದಿದ್ದಳೆಂದೂ ಹೇಳಲಾಗುತ್ತಿದೆ. ಕೊಲ್ಲಿಯಲ್ಲಿದ್ದ ಜೋಬಿನ್ಸ್ ಎರಡು ವಾರದ ಹಿಂದೆ ತಂದೆಯ ಮರಣದ ಹಿನ್ನೆಲೆಯಲ್ಲಿ ಊರಿಗೆ ತಲುಪಿದ್ದರು. ಪತ್ತನಂತಿಟ್ಟದಲ್ಲಿದ್ದ ದರ್ಶನ ಮಾವನ ಸಾವಿನ ಬಳಿಕ ಕೋಟಮಲದ ಪತಿಯ ಮನೆಗೆ ತಲುಪಿದ್ದರು. ತಂದೆಯ ಮರಣಾನಂತರ ಕಾರ್ಯಕ್ರಮಗಳ ಬಳಿಕ ಜೋಬಿನ್ಸ್ ಇಂದು ಗಲ್ಫ್‌ಗೆ ಹಿಂತಿರುಗಲಿರುವ ಮಧ್ಯೆ  ಪತ್ನಿಯ ಸಾವು ಸಂಭವಿಸಿದೆ.

RELATED NEWS

You cannot copy contents of this page