ಪತಿ ಜೊತೆ ನಡೆದು ಹೋಗುತ್ತಿದ್ದ ಯುವತಿಗೆ ಬೈಕ್ ಢಿಕ್ಕಿ ಹೊಡೆದು ಮೃತ್ಯು
ಹೊಸದುರ್ಗ: ಪತಿಯ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಯುವತಿ ಮೃತಪಟ್ಟರು. ಚಿತ್ತಾರಿ ಮುಕ್ಕೂಟ್ ನಾಟಂಗಲ್‌ನ ಅಭಿಲಾಷ್‌ರ ಪತ್ನಿ ಚಿತ್ರ (40) ಮೃತಪಟ್ಟವರು. ಕಳೆದ ಶನಿವಾರ ರಾತ್ರಿ 11.40ಕ್ಕೆ ಮಡಿಯನ್ ರಹ್ಮಾನಿಯ ರೆಸ್ಟೋರೆಂಟ್ ಸಮೀಪ ಅಪಘಾತ ಸಂಭವಿಸಿದೆ. ಹೋಟೆಲ್‌ನ ಸೆಕ್ಯೂರಿಟಿ ನೌಕರನಾದ ಅಭಿಲಾಷ್ ಕೆಲಸ ಮುಗಿಸಿ ಪತ್ನಿಯ ಜೊತೆ ನಡೆದು ಹೋಗುತ್ತಿದ್ದ ವೇಳೆ ಬೈಕ್ ಇವರಿಬ್ಬರಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರ ಗಾಯಗೊಂಡ ಚಿತ್ರರನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿ ಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ರಾತ್ರಿ ಸಾವು ಸಂಭವಿಸಿದೆ. ಅಭಿಲಾಷ್ ಗಾಯಗೊಂಡಿದ್ದರೂ ಚೇತರಿಸಿ ಕೊಂಡಿದ್ದಾರೆ.
ದಿ| ಅಪ್ಪು- ಜಾನಕಿ ದಂಪತಿ ಪುತ್ರಿಯಾದ ಚಿತ್ರಾ ಪತಿ, ಮಕ್ಕಳಾದ ಆದರ್ಶ್, ಭರತ್, ಸಹೋದರರಾದ ರಾಜೇಶ್, ರಾಜು, ಸಹೋದರಿ ಯರಾದ ಶಾರದ, ಕಮಲಾಕ್ಷಿ, ನಾರಾಯಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.