ಪತಿ ಮನೆಯಲ್ಲಿ ಯುವತಿ ನೇಣು ಬಿಗಿದು ಮೃತ್ಯು: ಸಾವಿನಲ್ಲಿ ಶಂಕೆ

ಹೊಸದುರ್ಗ: 10 ತಿಂಗಳ ಹಿಂದೆ ವಿವಾಹಿತೆಯಾದ ಯುವತಿ ಪತಿಗೃಹದ ಮಲಗುವ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಲಿಯಪರಂಬ ಪಡನ್ನಕಡಪ್ಪುರದ ಬೀಚಾರಕಡವ್ ಕಳತ್ತಿಲ್ ನಿವಾಸಿ ಸುನಿಲ್- ಗೀತಾ ದಂಪತಿ ಪುತ್ರಿ ನಿಖಿತ (20) ಮೃತ ಪಟ್ಟವರು. ತಳಿಪರಂಬ್ ಸಮೀಪದ ಆಂದೂರು ನಗರಸಭೆಯ ನಣಿಚ್ಚೇರಿ ನಿವಾಸಿ ವೈಶಾಖ್‌ರ ಪತ್ನಿಯಾಗಿದ್ದಾರೆ. ತಳಿಪ್ಪರಂಬ್ ಲೂರ್ದ್ ನರ್ಸಿಂಗ್ ಕಾಲೇಜಿನಲ್ಲಿ ಡಯಾಲಿಸಿಸ್ ಟೆಕ್ನೀಶಿ ಯನ್ ಕೋರ್ಸ್ ಕಲಿಯುತ್ತಿದ್ದರು. ನಿನ್ನೆ ಪಡನ್ನ ಕಡಪ್ಪುರದ ಮನೆಗೆ ತಲುಪಿದ ನಿಖಿತ ಸಂತೋಷದಿಂದ ಹಿಂತಿರುಗಿದ್ದು, ಸಾವಿನಲ್ಲಿ ಶಂಕೆಯಿದೆ ಎಂದು ಮಾವ ಕೆ.ಪಿ. ರವಿ ತಳಿಪ್ಪರಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದೇ ವೇಳೆ ಪತಿಗೃಹದಲ್ಲಿ ಮಾನಸಿಕವಾಗಿ ದೌರ್ಜನ್ಯಗೈಯ್ಯಲಾ ಗುತ್ತಿತ್ತೆಂದು ಈ ಬಗ್ಗೆ ಸಮೀಪದ  ಸಂಬಂಧಿಕರಲ್ಲಿ ಹೇಳಿರುವುದಾಗಿಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ.

RELATED NEWS

You cannot copy contents of this page