ಪತಿ ಮರಣ ಹೊಂದಿದರೆ ಪತ್ನಿಗೆ ಆ ಮನೆಯಲ್ಲೇ ವಾಸಿಸಲು ಹಕ್ಕಿದೆ- ಹೈಕೋರ್ಟ್

ಕೊಚ್ಚಿ: ಪತಿಯ ಮರಣದ ಬಳಿಕವೂ ಮಕ್ಕಳೊಂದಿಗೆ ಅದೇ ಮನೆಯಲ್ಲಿ ವಾಸಿಸಲು ಪತ್ನಿಗೆ ಕಾನೂನು ಪರವಾದ ಹಕ್ಕು ಇದೆ ಎಂದು ಹೈಕೋರ್ಟ್ ತಿಳಿಸಿದೆ. ಗೃಹ ದೌರ್ಜನ್ಯ ನಿಷೇಧ ಕಾನೂನು ಅನುಸಾರವಾಗಿ ಮಹಿಳೆ ಸಮಾಧಾನದಿಂದ ಆ ಮನೆ ಯಲ್ಲೇ ವಾಸಿಸುವುದನ್ನು ತಡೆಯಲು ಅಥವಾ ಅಲ್ಲಿಂದ ಹೊರ ಹಾಕಲು ಸಾಧ್ಯವಾಗದು ಎಂದು ಜಸ್ಟೀಸ್ ಎಂ.ಬಿ. ಸ್ನೇಹಲತ ಸ್ಪಷ್ಟಪಡಿಸಿದ್ದಾರೆ. ಪತಿಯ ಸಹೋದರರು, ಪತ್ನಿಯರು, ಪತಿಯ ತಾಯಿ ದ್ರೋಹಿಸುವುದು ಹಾಗೂ ಮನೆಯಿಂದ ಹೊರಗೆ ಹಾಕಿರುವುದಾಗಿ ಆರೋಪಿಸಿ ಪಾಲಕ್ಕಾಡ್ ನಿವಾಸಿಯಾದ ಯುವತಿ ನೀಡಿದ ಅರ್ಜಿಯಲ್ಲಿ ಹೈಕೋರ್ಟ್ ಈ ತೀರ್ಮಾನ ತಿಳಿಸಿದೆ.

2009ರಲ್ಲಿ ಯುವತಿಯ ಪತಿ ಮೃತಪಟ್ಟಿದ್ದರು. ಆ ಬಳಿಕ ಮಕ್ಕಳ ಸಹಿತ ಈ ಮನೆಯಲ್ಲೇ ಯುವತಿ ವಾಸವಾಗಿದ್ದಳು. ತವರು ಮನೆಯ ಸೊತ್ತು ವಿಂಗಡಣೆ ವೇಳೆ ಈಕೆಗೆ ಒಂದು ಮನೆ ಲಭಿಸಿತ್ತು. ಆದುದ ರಿಂದ ಯುವತಿಗೆ ಪತಿ ಮನೆಯಲ್ಲಿ ವಾಸ ಮಾಡಲು ಹಕ್ಕು ಇಲ್ಲವೆಂದು ತಿಳಿಸಿ ಇತರರು ರಂಗಕ್ಕಿಳಿದಿದ್ದರು. ಇದನ್ನು ಪ್ರಶ್ನಿಸಿ ಯುವತಿ ನ್ಯಾಯಾಲಯವನ್ನು ಸಮೀಪಿಸಿದ್ದಳು.

You cannot copy contents of this page