ಪತ್ನಿಗೆ ಹಲ್ಲೆಗೈದು ಕೊಲೆಗೆ ಯತ್ನ: ಪತಿ ಸೆರೆ
ಕುಂಬಳೆ: ಪತ್ನಿಗೆ ಹಲ್ಲೆಗೈದು ಕೊಲೆಗೈಯ್ಯ ಲೆತ್ನಿಸಿದ ಆರೋಪದಂತೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೀತಾಂಗೋಳಿ ನಿವಾಸಿ ಡೇವಿಸ್‌ರ ಪುತ್ರಿ ದೀಕ್ಷಿತ (26) ನೀಡಿದ ದೂರಿನಂತೆ ಪತಿ ಮಡಿಕೈ ನಿವಾಸಿ ಮಿಥುನ್ (25)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ಸಂಜೆ ದೀಕ್ಷಿತಳ ಮನೆಗೆ ತಲುಪಿದ ಮಿಥುನ್ ಹಲ್ಲೆಗೈದುದಾಗಿ ದೂರಲಾಗಿದೆ. ಹೆಲ್ಮೆಟ್‌ನಿಂದ ಹಲ್ಲೆಗೈಯ್ಯಲು ಮುಂದಾದಾಗ ತಪ್ಪಿಸಿಕೊಂಡುದರಿಂದ ಹೆಚ್ಚಿನ ಅಪಾಯದಿಂದ ಪಾರಾಗಿರುವುದಾಗಿ ದೀಕ್ಷಿತ ದೂರಿನಲ್ಲಿ ತಿಳಿಸಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.