ಪತ್ನಿಯನ್ನು ಕುತ್ತಿಗೆ ಬಿಗಿದು ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಸಜೆ, 3 ಲಕ್ಷ ರೂ. ದಂಡ
ಕಾಸರಗೋಡು: ಪತ್ನಿಯನ್ನು ಹಾಡಹಗಲೇ ಕುತ್ತಿಗೆಗೆ ಶಾಲು ಬಿಗಿದು ಕೊಲೆಗೈದ ಪ್ರಕರಣದ ಆರೋಪಿಗೆ ನ್ಯಾಯಾಲಯ ಜೀವಾವಧಿ ಸಜೆ ಹಾಗೂ ಮೂರು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಪೆರ್ಲ ಕೆ.ಕೆ. ರೋಡ್‌ನ ಅಜಿಲಡ್ಕ ನಿವಾಸಿ ಸುಶೀಲ (45) ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾದ ಪತಿ ಕೆ. ಜನಾರ್ದನ (54) ಎಂಬಾತನಿಗೆ ಕಾಸರಗೋಡು ಅಡಿಶನಲ್ ಡಿಸ್ಟ್ರಿಕ್ಟ್ ಆಂಡ್ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶ ಎ. ಮನೋಜ್ ಅವರು ಜೀವಾವಧಿ ಸಜೆ ಹಾಗೂ ಮೂರು ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ. 2020 ಸೆಪ್ಟಂಬರ್ 7ರಂದು ಜನಾರ್ದನ ಪತ್ನಿ ಸುಶೀಲರನ್ನು ಕೊಲೆಗೈದಿದ್ದನು. ಅಂದು ಅಪರಾಹ್ನ 2.30ರಿಂದ ಸಂಜೆ 6 ಗಂಟೆ ಮಧ್ಯೆ ಈ ಕೊಲೆ ಕೃತ್ಯ ನಡೆಸಲಾಗಿದೆ. ಮನೆಯಿಂದ ಬೊಬ್ಬೆ ಕೇಳಿ ನೆರೆಮನೆ ನಿವಾಸಿಗಳು ತಲುಪಿ ನೋಡಿದಾಗ ಸುಶೀಲ ಅರೆ ಪ್ರಜ್ಞಾವಸ್ಥೆ ಯಲ್ಲಿ ಕಂಡು ಬಂದಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಕೃತ್ಯವೆಂದು ಸಾಬೀತುಗೊಂ ಡಿತ್ತು. ಅನಂತರ ಅಂದು ಬದಿಯಡ್ಕ ಎಸ್.ಐ. ಆಗಿದ್ದ ವಿ.ಕೆ. ಅನೀಶ್ ಅವರು ಜನಾರ್ದನನನ್ನುಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದ್ದರು. ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿ ದ್ದನು. ಬಳಿಕ ಎಸ್‌ಐ ವಿ.ಕೆ. ಅನೀಶ್ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ವಾಗಿ ಅಡಿಶನಲ್ ಗವ. ಪ್ಲೀಡರ್ ಇ. ಲೋಹಿತಾಕ್ಷನ್ ಹಾಜರಾಗಿದ್ದರು.