ಪತ್ನಿಯೊಂದಿಗೆ ಸಂಪರ್ಕ ಶಂಕೆ: ವಿಮಾನ ನಿಲ್ದಾಣ ನೌಕರನ ಕಡಿದುಕೊಲೆ

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ  ನೌಕರನನ್ನು ಕಡಿದು ಕೊಲೆ ಮಾಡಲಾಗಿದೆ. ವಿಮಾನ ನಿಲ್ದಾಣದ ಟ್ರಾಲಿ ಆಪರೇಟರ್ ಆಗಿರುವ ರಾಮಕೃಷ್ಣ (48)ಎಂಬವರನ್ನು ಕೊಲೆ ಗೈಯ್ಯಲಾಗಿದೆ. ಈ ಪ್ರಕರಣದಲ್ಲಿ ಆರೋಪಿಯಾದ ರಮೇ ಶ ಎಂಬಾತನನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ನಿನ್ನೆ ರಾತ್ರಿ 7 ಗಂಟೆ ವೇಳೆ ದೇವನಹಳ್ಳಿ ಒಂದನೇ ಟರ್ಮಿನಲ್‌ನಲ್ಲಿ ಘಟನೆ ನಡೆದಿದೆ. ರಾಮಕೃಷ್ಣ ದೊಡ್ಡ ಕತ್ತಿ ಉಪಯೋಗಿಸಿ ಆಕ್ರಮಣ ನಡೆಸಿದ್ದಾನೆ. ರಮೇಶನ ಪತ್ನಿಯೊಂದಿಗೆ ರಾಮಕೃಷ್ಣನಿಗೆ ಸಂಪರ್ಕವಿದೆಯೆಂಬ ಸಂಶಯದ ಹಿನ್ನೆಲೆಯಲ್ಲಿ ಆರೋಪಿ ನೌಕರನನ್ನು ಕೊಲೆಗೈದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ತಲುಪಿ ರಾಮಕೃಷ್ಣನ ಬಳಿ ಬಂದು ಏನೋ ಹೇಳಲಿದೆಯೆಂದು ತಿಳಿಸಿ ಬಾತ್‌ರೂಂಗೆ ಕರೆದುಕೊಂಡು ಹೋಗಿ ಕಡಿದು ಕೊಲೆಗೈದಿದ್ದಾನೆ ನ್ನಲಾಗಿದೆ.  ಕತ್ತಿಯನ್ನು ಬ್ಯಾಗ್‌ನಲ್ಲಿರಿಸಿ ತೆರಳುತ್ತಿದ್ದ ವೇಳೆ ಆರೋಪಿಯನ್ನು ಸೆರೆಹಿಡಿಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

RELATED NEWS

You cannot copy contents of this page