ಪತ್ನಿ ಆಸ್ಪತ್ರೆಯಲ್ಲಿ ದಾಖಲು: ಪತಿ ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಪತ್ನಿಯನ್ನು ಅಸೌಖ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಿಸಿದ ಬೆನ್ನಲ್ಲೇ ಪತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ  ಘಟನೆ ನಡೆದಿದೆ.

ಅಡೂರು ಉರುಡೂರು ಪೇಲಮರ್ವ ಹೌಸ್‌ನ ಸೋಮೋಜಿ ರಾವ್‌ರ ಪುತ್ರ ರಾಮಕೃಷ್ಣ ರಾವ್ (೭೦) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ರಾಮಕೃಷ್ಣ ರಾವ್ ಹಾಗೂ ಪತ್ನಿ ಮಾತ್ರವೇ ವಾಸವಾಗಿದ್ದಾರೆ. ಪತ್ನಿ ಲೀಲಾವತಿಯನ್ನು ಅಸೌಖ್ಯದ ಹಿನ್ನೆಲೆಯಲ್ಲಿ ಕಾಸರಗೋಡಿನ ಆಯುರ್ವೇದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಮಧ್ಯೆ ರಾಮಕೃಷ್ಣ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಘಟನೆ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ.

ಮೃತರು ಮಕ್ಕಳಾದ ರಾಜೇಶ, ಮಾಲಿನಿ, ಚಂಚಲಾಕ್ಷಿ, ಅಳಿಯ-ಸೊಸೆಯಂದಿರಾದ  ಪುರುಷೋತ್ತಮ, ಅನಿಲ್‌ರಾಜ್, ರಾಜೇಶ್ವರಿ, ಸಹೋದರ-ಸಹೋದರಿಯರಾದ ಭಾಸ್ಕರ ರಾವ್, ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ತಾನೋಜಿ ರಾವ್ ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page