ಪಾಲಕ್ಕಾಡ್: ವಂಚನೆ ನಡೆಸಿ ಸೆರೆಯಾಗದಿರಲು ಮೃತ ಪಟ್ಟಿರುವುದಾಗಿ ಸ್ವಂತವಾಗಿ ವರದಿ ನೀಡಿ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಮಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿ ಸೆರೆಯಾಗಿದ್ದಾನೆ. ಪಾಲಕ್ಕಾಡ್ ಪೆರುಂಬಾಯಿಕ್ಕಾಡ್ ವಿಲ್ಲೇಜ್‌ನಲ್ಲಿ ಕುಮಾರನಲ್ಲೂರ್‌ಕರ ನಿವಾಸಿ ಸಜೀವ್ ಎಂ.ಆರ್.ನನ್ನು ಕೊಡೈಕೆನಲ್‌ನಿಂದ ಗಾಂಧೀನಗರ ಪೊಲೀಸರು ಬಂಧಿಸಿದ್ದಾರೆ. ನಕಲಿ ಚಿನ್ನಾಭರಣ ಅಡವಿರಿಸಿ ಹಣ ತೆಗೆದ ಪ್ರಕರಣದಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. ಕುಮಾರನ ಲ್ಲೂರ್‌ನಲ್ಲಿರುವ ಚಿನ್ನ ಅಡವಿರಿಸುವ ಸಂಸ್ಥೆಯಿಂದ ನಾಲ್ಕೂವರೆ ಲಕ್ಷ ರೂ. ವಂಚಿಸಿದ ಬಳಿಕ ಆರೋಪಿ ತಮಿಳುನಾಡಿನಲ್ಲಿ ರಹಸ್ಯವಾಗಿ ವಾಸಿಸುತ್ತಿದ್ದನು. ೨೦೨೪ರಲ್ಲಿ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ವಂಚನೆ ನಡೆಸಿದ ಬಳಿಕ ಈತ ಸಾವಿಗೀಡಾಗಿರುವುದಾಗಿ ಚೆನ್ನೈಯ ಅಡಯಾರ್‌ನಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಿರುವುದಾಗಿ ಯೂ ಪತ್ರಿಕೆಯಲ್ಲಿ ಸುದ್ಧಿ ನೀಡಿದ್ದನು. ಅದರ ಬಳಿಕ ತಲೆಮರೆಸಿಕೊಂಡಿದ್ದನು.
ಇನ್ಸ್‌ಪೆಕ್ಟರ್ ಶ್ರೀಜಿತ್ ಸಹಿತ ಹಲವು ಪೊಲೀಸ್ ಅಧಿಕಾರಿಗಳು ನಡೆಸಿದ ತನಿಖೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ಸೆರೆಹಿಡಿಯ ಲಾಗಿದೆ. ಈತ ಈ ರೀತಿಯ ಹಲವಾರು ಅಪರಾಧಗಳನ್ನು ನಡೆಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.