ಪತ್ರಿಕೆ ಓದುತ್ತಿದ್ದ ವೇಳೆ ಕುಸಿದುಬಿದ್ದು ಕೂಲಿ ಕಾರ್ಮಿಕ ನಿಧನ
ಪೆರ್ಲ: ಪತ್ರಿಕೆ ಓದುತ್ತಿದ್ದ ವೇಳೆ ಕುಸಿದು ಬಿದ್ದು ಕೂಲಿ ಕಾರ್ಮಿಕ ಮೃತಪಟ್ಟರು. ಸ್ವರ್ಗ ಬೆದ್ರಕ್ಕಾಡ್ ಬಳಿಯ ಮಲ್ಲತ್ತಡ್ಕ ನಿವಾಸಿ ಕೇಶವ ನಾಯ್ಕ್ (ನಾರಾಯಣ) (62) ನಿಧನ ಹೊಂದಿದರು. ಇವರು ನಿನ್ನೆ ಬೆಳಿಗ್ಗೆ ಚಹಾ ಕುಡಿದು ಪತ್ರಿಕೆ ಓದುತ್ತಿದ್ದಾಗ ಕುಸಿದುಬಿದ್ದಿದ್ದಾರೆ. ಕೂಡಲೇ ಪೆರ್ಲದ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆಗೆ ಮೃತಪಟ್ಟಿದ್ದರು.
ಮೃತರು ಪತ್ನಿ ಗೀತಾ, ಮಕ್ಕಳಾದ ರಾಜೇಶ್, ಸುಮಲತಾ, ಅನುಶ್ರೀ, ಅಳಿಯ ಕಾರ್ತಿಕ್, ಸಹೋದರ ಶ್ರೀಕೃಷ್ಣ, ಸಹೋದರಿಯರಾದ ಸುಂದರಿ, ಸುಗಂಧಿ, ಸತ್ಯ, ಸೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.