ಪತ್ವಾಡಿ ಮುತ್ತಲೀಬ್ ಕೊಲೆ: 5ನೇ ಆರೋಪಿ ಖುಲಾಸೆ
ಕಾಸರಗೋಡು: ಭೂಗತ ಲೋಕದ ತಂಡಗಳ ಮಧ್ಯೆ ಉಂಟಾದ ಗ್ಯಾಂಗ್‌ವಾರ್ ಹಿನ್ನೆಲೆ ಯಲ್ಲಿ ಕೊಲೆಗೀಡಾದ ಉಪ್ಪಳ ಪತ್ವಾಡಿ ನಿವಾಸಿ ಹಾಗೂ ಮಣ್ಣಂಗುಳಿ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ಅಬ್ದುಲ್ ಮುತ್ತಲೀಬ್ ಅಲಿಯಾಸ್ ಮುತ್ತಲೀಬ್‌ನನ್ನು ಕೊಲೆಗೈದ ಪ್ರಕರಣದ 5ನೇ ಆರೋಪಿಯನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(3) ತಪ್ಪಿತಸ್ಥನಲ್ಲವೆಂದು ಪತ್ತೆಹಚ್ಚಿ ಖುಲಾಸೆಗೊಳಿಸಿದೆ. ಕರ್ನಾಟಕ ಭದ್ರಾವತಿ ನಿವಾಸಿ ಸಯ್ಯಿದ್ ಆಸಿ ಫ್‌ನನ್ನು ಖುಲಾಸೆಗೊಳಿಸಲಾಗಿದೆ.
2013 ಅಕ್ಟೋಬರ್ 24ರಂದು ರಾತ್ರಿ 11 ಗಂಟೆಗೆ ಉಪ್ಪಳ ಮಣ್ಣಂಗುಳಿಯ ಮುತ್ತಲಿಬ್‌ನ ಫ್ಲ್ಯಾಟ್‌ನ ಸಮೀಪದಲ್ಲಿ ಕೊಲೆ ಕೃತ್ಯ ನಡೆದಿತ್ತು. ಮುಖಂಡ ಕಾಲಿಯಾ ರಫೀಕ್‌ನ ನೇತೃತ್ವದಲ್ಲಿರುವ ತಂಡ ಇರಿದು ಕೊಲೆಗೈದಿರುವುದಾಗಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ದಲ್ಲಿ ಐದು ಆರೋಪಿಗಳಿದ್ದು, ಪ್ರಥಮ ಆರೋಪಿ ಕಾಲಿಯಾ ರಫೀಕ್, ದ್ವಿತೀಯ ಆರೋಪಿ ಶಂಸುದ್ದೀನ್ ಎಂಬವರಿಗೆ ಶಿಕ್ಷೆ ವಿಧಿಸಲಾಗಿತ್ತು. 3, 4ನೇ ಆರೋಪಿಗಳನ್ನು ಖುಲಾಸೆಗೊಳಿಸ ಲಾಗಿದ್ದು, ಈಗ 5ನೇ ಆರೋಪಿಯನ್ನು ಕೂಡಾ ಖುಲಾಸೆಗೊಳಿಸಲಾಗಿದೆ.