ಪಳ್ಳತ್ತಡ್ಕದಲ್ಲಿ ಪುರುಷೋತ್ತಮ ಯಾಗ ನ. ೧೯ರಂದು: ಆಮಂತ್ರಣಪತ್ರಿಕೆ ಬಿಡುಗಡೆ
ಬದಿಯಡ್ಕ: ನವಂಬರ್ ೧೯ ರಂದು ಪಳ್ಳತ್ತಡ್ಕ ಮುದ್ದು ಮಂದಿ ರದಲ್ಲಿ ಪುರುಷೋತ್ತಮ ಯಾಗ ಸಮಿತಿ ನೇತೃತ್ವದಲ್ಲಿ ನಡೆಯಲಿರುವ ಪುರುಷೋತ್ತಮ ಯಾಗ, ಧನ್ವಂತರಿ ಪೂಜೆ, ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಯನ್ನು ಬದಿಯಡ್ಕ ಗಣೇಶ ಮಂದಿರದಲ್ಲಿ ಬಿಡುಗಡೆಗೊಳಿಸ ಲಾಯಿತು. ಧಾರ್ಮಿಕ ಮುಂದಾಳು ಜಯದೇವ ಖಂಡಿಗೆ ಬಿಡುಗಡೆಗೊಳಿ ಸಿದರು. ಈ ವೇಳೆ ಯಾಗ ಸಮಿತಿಯ ಪದಾಧಿಕಾರಿಗಳಾದ ಪುಂಡರೀಕಾಕ್ಷ ಬೆಳ್ಳೂರು, ನಾರಾಯಣ ಶೆಟ್ಟಿ ನೀರ್ಚಾಲು, ಬಾಲಕೃಷ್ಣ ನೀರ್ಚಾಲು, ಮಂಜುನಾಥ ಮಾನ್ಯ, ಲೋಹಿತಾಕ್ಷ ಬದಿಯಡ್ಕ, ಲಕ್ಷ್ಮಣ ಪ್ರಭು ಬದಿಯಡ್ಕ, ರಾಜನ್ ಮುಳಿಯಾರು, ದಾಮೋದರನ್ ಬೋವಿಕ್ಕಾನ, ಕೃಷ್ಣನ್ ಬೋವಿಕ್ಕಾನ, ಸುರೇಶ್ ಬಾಬು ಕಾನತ್ತೂರು, ಶಾರದಾ ಎಸ್ ಭಟ್ ಕಾಡಮನೆ, ದಿವ್ಯ ಪಿ ಭಟ್ ಪಳ್ಳತ್ತಡ್ಕ, ಮಮತಾ ಬದಿಯಡ್ಕ, ಶಾಂತಾ ಕುಮಾರಿ ಟೀಚರ್ ಪಳ್ಳತ್ತಡ್ಕ ಭಾಗವಹಿಸಿದ್ದರು. ಯಾಗದ ವೈದಿಕ ಕಾರ್ಯಕ್ರಮಕ್ಕೆ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಮಾರ್ಗದರ್ಶನ ನೀಡುವರು.