ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನ ವಾರ್ಷಿಕೋತ್ಸವ

ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರ ಹ್ಮಣ್ಯ ದೇವಸ್ಥಾನ ಪ್ರತಿಷ್ಠಾ ದಿನ ವಾರ್ಷಿಕೋತ್ಸವ ಚಂಡಿಕಾ ಹೋಮ ದೊಂದಿಗೆ ನಡೆಯಿತು. ಹೊರನಾಡು ಕೆ. ಯು ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ಗಣಹೋಮ, ಶುದ್ದಿಕಲಶ, ಕಲಶಾಭಿಷೇಕ, ವಿಗ್ರಹಪೂಜೆ ನಡೆದವು. ಕೂಡ್ಲು ನಾಗೇಂದ್ರ ಭಟ್ ನೇತೃತ್ವದಲ್ಲಿ ಚಂಡಿಕಾಹೋಮ ನಡೆಯಿತು ಧಾರ್ಮಿಕ ಮುಂದಾಳು ಕೆ ಎನ್ ವೆಂಕಟ್ರಮಣ ಹೊಳ್ಳ ಉಪಸ್ಥಿ ತರಿದ್ದರು. ಪಾಂಗೋಡು ಶ್ರೀ ದುರ್ಗಾ ಭಜನಾ ಸಂಘದ ಸದಸ್ಯರಿಂದ ಸಾಮೂಹಿಕ ಲಲಿತಾ ಸಹಸ್ರ ನಾಮ ಪಠಣ ನಡೆಯಿತು. ದೇವಸ್ಥಾನ ಸಮಿತಿ ಅಧ್ಯಕ್ಷÀ ವಾಮನ್ ರಾವ್ ಬೇಕಲ್ ಶುಭ ಹಾರೈಸಿದರು.

You cannot copy contents of this page