ಪಾಂಡಿಯಲ್ಲೂ ಚಿರತೆ ಪ್ರತ್ಯಕ್ಷಗೊಂಡಿರುವುದಾಗಿ ವದಂತಿ

ಅಡೂರು: ಮುಳಿಯಾರು ಪಂಚಾಯತ್‌ನ ಅರಣ್ಯದಲ್ಲಿ ಕಾಣಿಸಿಕೊಂಡ ಚಿರತೆಗಾಗಿ ಶೋಧ ಮುಂದುವರಿಯುತ್ತಿರುವಾಗಲೇ ಪಾಂಡಿಯಲ್ಲೂ ಚಿರತೆ ಪ್ರತ್ಯಕ್ಷಗೊಂ ಡಿರುವುದಾಗಿ ವರದಿಯಾಗಿದೆ. ಪಾಂಡಿ ಭಜನಾ ಮಂದಿರ ಬಳಿಯ ರಸ್ತೆಯಲ್ಲಿ ನಿನ್ನೆ ರಾತ್ರಿ ಎರಡು ಚಿರತೆಗಳು ಕಂಡುಬಂದಿವೆಯೆಂದು ತಿಳಿಸಲಾಗಿದೆ.

ಸಿಪಿಎಂನ ಸಮ್ಮೇಳನದಂಗವಾಗಿ ಪಾಂಡಿಯಲ್ಲಿ ನಿನ್ನೆ ವಾಲಿಬಾಲ್ ಪಂದ್ಯಾಟ ಏರ್ಪಡಿಸಲಾಗಿತ್ತು.  ಪಂದ್ಯಾಟ  ವೀಕ್ಷಿಸಿ ಬೇತೂರುಪಾರ ಭಾಗಕ್ಕೆ ತೆರಳುತ್ತಿದ್ದವರಿಗೆ  ಚಿರತೆಗಳು ಕಾಣಿಸಿವೆ ಎನ್ನಲಾಗುತ್ತಿದೆ. ವಿಷಯ ವನ್ನು ಅರಣ್ಯ ಇಲಾಖೆಗೆ ತಿಳಿಸಿರು ವುದಾಗಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ  ಈ ಭಾಗದಲ್ಲಿ ಶೋಧ ಕಾರ್ಯ ಆರಂಭಿಸುವ ಸಾಧ್ಯತೆ ಯಿದೆ. ಇದೇ ವೇಳೆ ಪಾಂಡಿ ಬಳಿ ಚಿರತೆಗಳು ಕಾಣಿಸಿವೆಯೆಂಬ ಸುದ್ದಿ ಹರಡುತ್ತಿದ್ದಂತೆ ಈ ಭಾಗದಲ್ಲಿ ಆತಂಕ ಹುಟ್ಟಿಸಿದೆ. ಇದೇ ವೇಳೆ ಇರಿಯಣ್ಣಿ ಭಾಗದಲ್ಲಿ ಕಾಣಿಸಿಕೊಂಡ ಚಿರತೆಯ ಪತ್ತೆಗಾಗಿ ಶೋಧ ಮುಂದುವರಿ ಯುತ್ತಿದೆ. ಚಿರತೆಯ ಇರುವಿಕೆ ಖಚಿತಪಡಿಸಲು ಅರಣ್ಯ ಇಲಾಖೆ ಇರಿಯಣ್ಣಿ ಭಾಗದಲ್ಲಿ ಇರಿಸಿದ ಕ್ಯಾಮರಾದಲ್ಲಿ ಚಿರತೆಯ ಚಿತ್ರ  ಸೆರೆ ಯಾಗಿದೆಯೆಂದು ಹೇಳಲಾಗುತ್ತಿದೆ.

ಕೆಲವು ದಿನಗಳ ಹಿಂದೆ ಪಾಂಡಿ ಸಮೀಪ ಚಿರತೆಯೊಂದು  ಕುಣಿಕೆಯಲ್ಲಿ ಸಿಲುಕಿ ಸಾವಿಗೀಡಾದ ಘಟನೆಯೂ ನಡೆದಿತ್ತು. ಈ ಹಿನ್ನೆಲೆ ಯಲ್ಲಿ ಅಲ್ಲಲ್ಲಿ ಚಿರತೆ ಕಾಣಿಸಿಕೊಂ ಡಿದೆಯೆಂಬ ವದಂತಿಯನ್ನು ತಿರಸ್ಕರಿಸಲು ಸಾಧ್ಯವಾಗದಂತಾಗಿದೆ.

RELATED NEWS

You cannot copy contents of this page