ಪಾಕಿಸ್ತಾನದಲ್ಲಿ ಇತಿಹಾಸ ಸೃಷ್ಟಿಸಿ ಹಿಂದೂ ಯುವತಿ ಚುನಾವಣೆ ಸ್ಪರ್ಧೆಗೆ
ಇಸ್ಲಮಾಬಾದ್: ಪಾಕಿಸ್ತಾನದ ಇತಿಹಾಸದಲ್ಲೇ ಪ್ರಥಮವಾಗಿ ಹಿಂದೂ ಮಹಿಳೆಯೋರ್ವೆ ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ. ಖೈಬರ್ ಪಕ್ತೂನ್‌ಕ್ವ ವಲಯದಲ್ಲಿ ಮುನೇರ್ ಜಿಲ್ಲೆಯಲ್ಲಿ ಡಾ. ಸವೀರ ಪರ್ಕಾಶ್ ಎಂಬ ಯುವತಿ ನಾಮಪತ್ರಿಕೆ ಸಲ್ಲಿಸಿದ್ದಾರೆ. ೨೦೨೪ ಫೆಬ್ರವರಿ ೮ರಂದು ಇಲ್ಲಿ ಚುನಾವಣೆ ನಡೆಯಲಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯಿಂದ (ಪಿಪಿಪಿ) ಸವೀರ ಸ್ಪರ್ಧೆಗಿಳಿದಿದ್ದಾರೆ. ಇವರ ತಂದೆ ಡಾ. ಓಂ ಪರ್ಕಾಶ್ ೩೫ ವರ್ಷದಿಂದ ಪಿಪಿಪಿಯ ಸಕ್ರಿಯ ಕಾರ್ಯಕರ್ತ ರಾಗಿದ್ದಾರೆ. ಅಂಬೋ ಟ್‌ಬಾದ್ ಇಂಟರ್‌ನೇಶನಲ್ ಮೆಡಿಕಲ್ ಕಾಲೇಜಿನಲ್ಲಿ ೨೦೨೨ರಲ್ಲಿ ಪದವಿ ಗಳಿಸಿದ ಸವೀರ ಪಿಪಿಪಿಯ ಮಹಿಳಾ ವಿಭಾಗ ಪ್ರಧಾನ ಕಾರ್ಯದರ್ಶಿ ಯಾಗಿದ್ದಾರೆ. ಮಹಿಳೆಯರ ಉನ್ನತಿಗಾಗಿ ಹಾಗೂ ಅವರ ಹಕ್ಕುಗಳಿಗೆ ಬೇಕಾಗಿ ಹೋರಾಡುವುದು ತನ್ನ ಉದ್ದೇಶವೆಂದು ಸವೀರಾ ಸ್ಪಷ್ಟಪಡಿಸಿದ್ದಾರೆ. ೫೫ ವರ್ಷಗಳ ಬಳಿಕ ಈ ವಲಯದಲ್ಲಿ ಮಹಿಳೆಯೋರ್ವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ.